ಮೈಸೂರು

ಸೆ.12 ರಿಂದ ಸ್ವರ್ಣಗೌರಿ -ವರಸಿದ್ಧಿ ವಿನಾಯಕ ಸ್ವಾಮಿ ಪೂಜಾ ಮಹೋತ್ಸವ

ಮೈಸೂರು,ಸೆ.11 : ಮೈಸೂರು ವೀರಶೈವ ಸಜ್ಜನ ಸಂಘದ ವತಿಯಿಂದ 43ನೇ ವರ್ಷದ ಶ್ರೀಸ್ವರ್ಣ ಗೌರಿ ಹಾಗೂ ವರಸಿದ್ಧಿ ವಿನಾಯಕ ಸ್ವಾಮಿಯ ಪೂಜಾ ಮಹೋತ್ಸವವನ್ನು ಸೆ.12 ರಿಂದ 16ರವರೆಗೆ ಕಬೀರ್ ರಸ್ತೆಯ ಕಂಠಿಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಸೆ.14ರ ಸಂಜೆ 5.30ಕ್ಕೆ ಶಾರದಾ ಮಹಿಳಾ ಸೇವಾ ಸಮಾಜದ ವತಿಯಿಂದ ಕುಂಕುಮಾರ್ಚನೆ ಹಾಗೂ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸೆ.15ರ ಸಂಜೆ 7.30ಕ್ಕೆ ಕ್ರಿಯಾ ಅಭಿವ್ಯಕ್ತಿ ತಂಡದವರಿಂದ ಜಾನಪದ ಹಾಡುಗಾರಿಕೆ ಹಾಗೂ ಕ್ರೀಡೆಯನ್ನು ಆಯೋಜಿಸಲಾಗಿದೆ. ಸೆ.16ರಂದು ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ಹಾಗೂ 3.30ಕ್ಕೆ ವಿನಾಯಕಸ್ವಾಮಿಯ ಮೆರವಣಿಗೆ ನಂತರ ವಿಸರ್ಜನೆ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: