ಸುದ್ದಿ ಸಂಕ್ಷಿಪ್ತ

ಸೆ.14ರಂದು ವಿಟಿಯೂ ಅಂತರ ಕಾಲೇಜು ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿ

ಮೈಸೂರು,ಸೆ.11 : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ದಿ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ವತಿಯಿಂದ ವಿಟಿಯೂ ಅಂತರ ಕಾಲೇಜು ಮೈಸೂರು ವಲಯ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಕಾಲೇಜಿನ ಡೈಮಂಡ್ ಜ್ಯೂಬಿಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೆ.14ರ ಬೆಳಗ್ಗೆ 9.30 ರಿಂದ ಏರ್ಪಡಿಸಲಾಗಿದೆ.

ಮೈಸೂರು ಜಿಲ್ಲಾ ಬಾಸ್ಕೆಟ್ ಅಸೋಸಿಯೇಷನ್ ಮತ್ತು ಅಲುಮಿನಿಯ ಕಾರ್ಯದರ್ಶಿ ಬಿ.ಪುಷ್ಪರಾಜ್ ಮುಖ್ಯ ಅತಿಥಿಯಾಗಿದ್ದಾರೆ. ಕಾಲೇಜಿನ ಡೀನ್ ಡಾ. ಜಿ.ಎಸ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: