ಕರ್ನಾಟಕಪ್ರಮುಖ ಸುದ್ದಿ

ಬೇಕಿದ್ರೆ ಬಿಜೆಪಿ ಶಾಸಕರಿಂದಲೇ ರಾಜೀನಾಮೆ ಕೊಡಿಸೋಣ! ಅಂದ್ರು ಸಿ.ಎಂ ಕುಮಾರಸ್ವಾಮಿ

ಮಂಡ್ಯ (ಸೆ.11): “ಸ್ವಲ್ಪ ಸಮಯ ನೋಡೋಣ, ನಿಮಗೆ ಬೇರೇ ಥರಹ ಯೂಟರ್ನ್ ತಗೋಬೇಕಂತಿದ್ದರೆ, ಬಿಜೆಪಿಯಿಂದಲೇ ಐವರನ್ನು ರಾಜೀನಾಮೆ ಕೊಡಿಸೋಣ…!” ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಜಾರಕಿಹೊಳಿ ಸಹೋದರರ ಅಸಮಾಧಾನದ ಕುರಿತಂತೆ ಮಂಡ್ಯದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಮುಖ್ಯಮಂತ್ರಿಗಳು ಈ ರೀತಿ ಪ್ರತಿಕ್ರಿಯಿಸಿದರು. ಜಾರಕಿಹೊಳಿ ಸಹೋದರರ ನಡೆಯಿಂದ ಸರಕಾರಕ್ಕೇನಾದರು ಧಕ್ಕೆಯಾಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಸಿ.ಎಂ, ಜಾರಕಿಹೊಳಿ ಸಹೋದರರ ಅಸಮಾಧಾನದ ಬಗ್ಗೆ ನನಗೇನು ಗೊತ್ತಿಲ್ಲ. ಈ ಬಗ್ಗೆ ಅವರೆಲ್ಲೂ ಹೇಳಿಕೆ ನೀಡಿಲ್ಲ ಎಂದರು.

ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಸುದ್ದಿ ನೋಡುತ್ತಿದ್ದೇನೆ. ಸರಕಾರ ಇನ್ನೇನೋ ಬಿದ್ದೇಬಿಟ್ಟಿತು ಎಂದು ಸುದ್ದಿ ಮಾಡುತ್ತೀರಿ. ನಿಮಗೆ ಅದೆಲ್ಲಿಂದ ಮಾಹಿತಿ ಸಿಗುತ್ತದೆಯೋ ಗೊತ್ತಿಲ್ಲ ಎಂದರು. ಮಾಧ್ಯಮಗಳು ಯಾವ ಉದ್ದೇಶದಿಂದ ಈ ರೀತಿ ಸುದ್ದಿ ಮಾಡುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಿಮಗೆ ಬೇಕು ಅಂತಿಂದ್ರೆ ಸ್ವಲ್ಪ ಸಮಯ ನೋಡೋಣ, ನಿಮಗೆ ಬೇರೇ ತರಹ ಯೂಟರ್ನ್ ತಗೋಬೇಕಂತಿದ್ದರೆ, ಐದು ಜನರನ್ನು ಬಿಜೆಪಿಯಿಂದಲೇ ರಾಜೀನಾಮೆ ಕೊಡಿಸೋಣ ಎಂದು ಮಾಧ್ಯಮದವರನ್ನುದ್ದೇಶಿಸಿ ಹೇಳುವ ಮೂಲಕ ಕುಮಾರಸ್ವಾಮಿ ಕುತೂಹಲ ಮೂಡಿಸಿದರು. (ಎನ್.ಬಿ)

Leave a Reply

comments

Related Articles

error: