
ಮೈಸೂರುಸುದ್ದಿ ಸಂಕ್ಷಿಪ್ತ
ರೈತರಿಗಾಗಿ ನಗದುರಹಿತ ಬ್ಯಾಂಕಿಂಗ್ ಕಾರ್ಯಾಗಾರ; ಡಿ.28 ರಂದು
ಸುತ್ತೂರಿನ ಜೆ.ಎಸ್.ಎಸ್ ಕೃಷಿ ವಿಜ್ಞಾನ ಕೇಂದ್ರವು ಡಿಸೆಂಬರ್ 23 ರಿಂದ 31ರ ವರೆಗೆ “ಜೈಕಿಸಾನ್ ಜೈವಿಜ್ಞಾನ್” ಸಪ್ತಾಹವಾಗಿ ಆಚರಿಸುತ್ತಿದೆ.
ಕಾರ್ಯಕ್ರಮದ ಅಂಗವಾಗಿ ಡಿ.28 ಬುಧವಾರದಂದು ಬೆಳಗ್ಗೆ 10.30ಕ್ಕೆ “ನಗದು ರಹಿತ ಬ್ಯಾಂಕಿಂಗ್” ಕುರಿತು ರೈತರಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಿದೆ. ಇದೇ ಸಂದರ್ಭ ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ತಜ್ಞರು ಮಾತನಾಡಲಿದ್ದಾರೆ.
ಕೆವಿಕೆಯೊಂದಿಗೆ ಮೈಸೂರಿನ ನಬಾರ್ಡ್ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಅಧ್ಯಾಯ – ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಾಡಾಗಿದ್ದು, ಲೀಡ್ ಬ್ಯಾಂಕ್ ಹಾಗೂ ಸುತ್ತೂರಿನ ಎಸ್.ಬಿ.ಎಂ ಮ್ಯಾನೇಜರ್, ಕೃಷಿ ತಜ್ಞರುಗಳು, ಪ್ರಗತಿಪರ ರೈತರು ಭಾಗವಹಿಸಲಿದ್ದಾರೆ ಎಂದು ಐಸಿಎಆರ್-ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಅರುಣ್ ಬಳಮಟ್ಟಿ ತಿಳಿಸಿದ್ದಾರೆ.