ಮೈಸೂರು

ಪ್ರೊ.ಎಂ.ಜೆ.ಕಮಲಾಕ್ಷಿ – ಡಾ.ಎಸ್.ಸಿ.ಪಾಟೀಲ ಅವರುಗಳಿಗೆ ಡಿ.ವಿ.ಹಾಲಭಾವಿ ಪ್ರಶಸ್ತಿ

ಮೈಸೂರು,ಸೆ.11 : ಜೆಎಸ್ಎಸ್ ವಿದ್ಯಾಪೀಠ, ಧಾರವಾಡದ ಬೆಲ್ಲದ ಶಿಕ್ಷಣ ಮತ್ತು ಕೃಷಿ ಪ್ರತಿಷ್ಟಾನ ಸಹಯೋಗದೊಂದಿಗೆ ಕಲಾವಿದ ಡಿ.ವಿ.ಹಾಲಭಾವಿಯವರ ಹೆಸರಿನಲ್ಲಿ ಕೊಡಮಾಡಲ್ಪಡುವ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಪ್ರೊ.ಎಂ.ಜೆ.ಕಮಲಾಕ್ಷಿ ಮತ್ತು ಡಾ.ಎಸ್.ಸಿ.ಪಾಟೀಲ ಅವರು ಪಾತ್ರರಾಗಿದ್ದಾರೆ.

ಪರಿಚಯ :

ಪ್ರೊ.ಎಂ.ಜೆ.ಕಮಲಾಕ್ಷಿಯವರು ಬಹುಮುಖ ಪ್ರತಿಭೆ, ಕಲಾವಿದೆ, ನಾಟಕ, ಸಮೂಹಗೀತೆ, ಪ್ರಾಕೃತಿಕ ಚಿಕಿತ್ಸೆ, ರೇಖಿ, ಅಕ್ಯುಪ್ರೆಶರ್, ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿದ್ದಾರೆ. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿವಿಯಲ್ಲಿ ಭಿತ್ತಿಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ, ಚಿತ್ರಕಲಾ ಪರಿಷತ್ ಕಲಾಶಾಲೆಯ ಪ್ರಾಂಶುಪಾಲರಾಗಿ ಸದಸ್ಯರಾಗಿ ಹಲವು ವಿವಿಗಳಲ್ಲಿ ಅಧ್ಯಯನ ಪೀಠಗಳ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಮೇರಿಕಾದ ಅಕ್ಕ ಮತ್ತು ವಿಶ್ವಸಂಸ್ಥೆಯ ಯುನಿಸೆಫ್ ಸಂಸ್ಥೆ ಹೊರತರುವ ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಭಾಜನರಾಗಿದ್ದಾರೆ.

ಡಾ.ಎನ್. ಸಿ.ಪಾಟೀಲ ಅವರು ಕಲಾಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಸಂಶೋಧಕರಾಗಿ, ಲೇಖಕರಾಗಿ ಹಂಪಿ ಕನ್ನಡ ವಿವಿಯ ಲಲಿತ ಕಲಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ,ಸಂಸ್ಕೃತಿ, ಜಾನಪದ ಕರಕುಶಲ ಕಲೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಲಲಿತಕಲಾ ಅಕಾಡೆಮಿಯ ಹಿರಿಯ ಕಲಾವಿದ ಪ್ರಶಸ್ತಿ ಅತ್ಯುತ್ತಮ ಕಲಾವಿದ ಪ್ರಶಸ್ತಿ, ಸಂಶೋಧನ ಸಾಧಕ ಪ್ರಶಸ್ತಿಗಳು ಲಭಿಸಿವೆ.

ಇವರುಗಳ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: