ದೇಶ

ತಮಿಳುನಾಡು ಮಾಜಿ ಮುಖ್ಯಕಾರ್ಯದರ್ಶಿ ಆಸ್ಪತ್ರೆಗೆ ದಾಖಲು

ಈಚೆಗೆ ಐಟಿ ದಾಳಿಗೊಳಗಾಗಿದ್ದ ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಅವರಿಗೆ ಲಘು ಹೃದಯಘಾತವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಚೆನ್ಹೈನ ಶ್ರೀರಾಮಚಂದ್ರ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ಮೇಲಸ್ತುವಾರಿಯಲ್ಲಿ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮ್ ಮೋಹನ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 34 ಲಕ್ಷ ರೂಪಾಯಿ ಹೊಸ ನೋಟುಗಳನ್ನು ಹಾಗೂ 5 ಕೆ.ಜಿ. ಬಂಗಾರವನ್ನು ವಶಪಡಿಸಿಕೊಂಡಿದ್ದರು. ದಾಳಿ ನಂತರ ಅವರನ್ನು ಮುಖ್ಯಕಾರ್ಯದರ್ಶಿ ಸ್ಥಾನದಿಂದ ತಮಿಳುನಾಡು ಸರ್ಕಾರ ಅಮಾನತ್ತುಗೊಳಿಸಿತ್ತು.

 

Leave a Reply

comments

Related Articles

error: