ಮೈಸೂರುಸುದ್ದಿ ಸಂಕ್ಷಿಪ್ತ

ಸುತ್ತೂರು ಜಾತ್ರೆ – ಗಾಳಿಪಟ ಸ್ಪರ್ಧೆ; ಜ.26ಕ್ಕೆ

ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ.24 ರಿಂದ 29ರ ವರೆಗೆ ಜರುಗಲಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಗಾಳಿಪಟ ಸ್ಪರ್ಧೆ ನಡೆಯಲಿದೆ.

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಒಟ್ಟು ನಾಲ್ಕು ವಿಭಾಗದಲ್ಲಿ ಗಾಳಿಪಟ ಸ್ಪರ್ಧೆಯನ್ನು ಜನವರಿ 26ರ ಗುರುವಾರ ಏರ್ಪಡಿಸಲಾಗಿದೆ. ವಿಶೇಷವಾಗಿ ಬೆಂಗಳೂರಿನ ಕೈಟ್ ಕ್ಲಬ್ ಸದಸ್ಯರಿಂದ ವಿವಿಧ ವಿನ್ಯಾಸದ ಸುಂದರ ಗಾಳಿಪಟ ಪ್ರದರ್ಶನವನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ, ನಗದು ಬಹುಮಾನ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ಮಕ್ಕಳು ಹಾಗೂ ಸಾರ್ವಜನಿಕರು ವಿನೋದ್ ಕುಮಾರ್ ಮತ್ತು ಎಂ. ಗೋಪಾಲ್ ಅವರನ್ನು 8884932916, 7676644449, 9343777797 ಸಂಖ್ಯೆಯ ಮೊಬೈಲ್ ಕರೆಯ ಮೂಲಕ ಅಥವಾ ಜಾತ್ರಾ ಮಹೋತ್ಸವ ಕಾರ್ಯಾಲಯವನ್ನು ನೇರವಾಗಿ ಅಥವಾ 0821-2548212 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: