ಮೈಸೂರು

ಸಂಗೀತ ವಿಶ್ವವಿದ್ಯಾನಿಲಯಕ್ಕೆ ಶಾಸಕ ಎಸ್.ಎ. ರಾಮದಾಸ್ ಭೇಟಿ : ಅಧಿಕಾರಿಗಳೊಂದಿಗೆ ಚರ್ಚೆ

ಮೈಸೂರು,ಸೆ.12:- ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಕ್ಕೆ ಶಾಸಕ ಎಸ್.ಎ. ರಾಮದಾಸ್ ಭೇಟಿ ನೀಡಿ ಕುಲಪತಿ ಮತ್ತು ವಿವಿಯ ಅಧಿಕಾರಿಗಳೊಂದಿಗೆ ಹಾಗೂ ಮುಷ್ಕರ ನಡೆಸಿದ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ವಾರದ ಹಿಂದೆ ಸ್ವೀಕರಿಸಿದ್ದ ಅಹವಾಲುಗಳನ್ನು ಚರ್ಚಿಸಿ ಪ್ರಮುಖವಾಗಿ ಅವಶ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

8ಬೋಧನಾ ಕೊಠಡಿಗಳಿದ್ದು, ಇನ್ನು ಒಟ್ಟು ನಾಲ್ಕು ಕೊಠಡಿಗಳನ್ನು 4.25ಕೋ.ರೂ.ವೆಚ್ಚದಲ್ಲಿ ಒಂದು ಅಡಿಟೋರಿಯಂ 4.65ಕೋ.ರೂ.ವೆಚ್ಚದಲ್ಲಿ ಹಾಲಿ ಇರುವ ಕ್ಯಾಂಪಸ್ ನಲ್ಲೇ ನಿರ್ಮಾಣ ಮಾಡುವ ಸಂಬಂಧ ವಿವಿಯಿಂದ ಸಿದ್ಧಪಡಿಸಲಾಗಿರುವ ಅಂದಾಜು ಪಟ್ಟಿಯನ್ನು ಅನುಮೋದನೆಗಾಗಿ ಕೂಡಲೇ ಲೋಕೋಪಯೋಗಿ ಇಲಾಖೆಗೆ ಸಲ್ಲಿಸುವಂತೆ ನಿನ್ನೆ ನಡೆದ ಸಭೆಯಲ್ಲಿ ಸೂಚಿಸಲಾಯಿತು. ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಸರ್ಕಾರದಿಂದ ಅನುಮೋದನೆ ದೊರಕಿಸಿಕೊಡುವಂತೆ ಸಂಬಂಧಿತ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರಿಗೂ ತಿಳಿಸಲಾಯಿತು.

ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದ್ದು, ವಿವಿ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ಚರ್ಚಿಸಲಾಗಿದ್ದು, ವಿವಿ ಹಿಂಭಾಗದಲ್ಲಿನ ಬುದ್ಧವಿಹಾರದ ಆವರಣದಲ್ಲಿರುವ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಸಂಬಂಧ ಅನುಮೋದನೆಗಾಗಿ ಪತ್ರವನ್ನು ವಿವಿ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ವಿವಿ ಅಧಿಕಾರಿಗಳಿಗೆ ಸೂಚಿಸಿದರು. (ಎಸ್.ಎಚ್)

Leave a Reply

comments

Related Articles

error: