ಮೈಸೂರು

ಪ್ರತ್ಯೇಕ ಪ್ರಕರಣ : ಪತಿಯ ಕಿರುಕುಳದಿಂದ ಮನನೊಂದು ಇಬ್ಬರು ಮಹಿಳೆಯರು ಆತ್ಮಹತ್ಯೆ

ಮೈಸೂರು,ಸೆ.12:- ಪತಿಯ ಕಿರುಕುಳದಿಂದ ಬೇಸತ್ತು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಶ್ರೀರಾಂಪುರದ ನಿವಾಸಿ ಪ್ರಮೋದ್ ಎಂಬವರ ಪತ್ನಿ ಅಶ್ವಿನಿ ಎಂಬವರು ಪತಿಯ ಕಿರುಕುಳದಿಂದ ಮನನೊಂದು ಸಾಯುತ್ತಿದ್ದೇನೆಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಇವರು ಪ್ರೇಮವಿವಾಹವಾಗಿದ್ದು, ಎರಡೂವರೆ ವರ್ಷದ ಹೆಣ್ಣು ಮಗುವಿತ್ತು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರ ನಿವಾಸಿ ಸಿದ್ಧರಾಜು ಪತ್ನಿ ಗೀತಾ(21)ಎಂಬವರು ಪತಿ ನೀಡುವ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ. ಆರು ವರ್ಷಗಳ ಹಿಂದೆ ಸಿದ್ದರಾಜುವನ್ನು ವಿವಾಹವಾಗಿದ್ದ ಗೀತಾಗೆ ಪತಿ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: