ಕರ್ನಾಟಕಪ್ರಮುಖ ಸುದ್ದಿ

ಪಿಒಪಿ ಗೌರಿ-ಗಣೇಶ ತ್ಯಜಿಸಿ ಪರಿಸರ ಉಳಿಸಿ: ಸಿಎಂ ಕುಮಾರಸ್ವಾಮಿ ಮನವಿ

ಬೆಂಗಳೂರು (ಸೆ.12): ರಾಜ್ಯದ ಜನತೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಪರಿಸರ ಸ್ನೇಹಿ ಗಣಪನ ಸ್ಥಾಪಿಸಿ ಪರಿಸರ ಉಳಿಸಿ ಎಂದು ಮನವಿ ಮಾಡಿದ್ದಾರೆ.

ಪಿಒಪಿ ಗಣೇಶ ತಯಾರಿಕೆ ಮತ್ತು ಪ್ರತಿಷ್ಠಾಪನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮನೆಗಳಲ್ಲಿ ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಡಿ, ಮಣ್ಣಿನ ಗಣೇಶ ಮಾಡಿ ಕೂರಿಸಿ ಪರಿಸರ ಉಳಿಸಿ ಎಂದು ನಾಡಿನ ಜನತೆಗೆ ಸಿಎಂ ಮನವಿ ಮಾಡಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆಯನ್ನು ತಮ್ಮ ಮನೆಗಳಲ್ಲೇ ನೀರು ತುಂಬಿದ ಬಕೇಟ್ ಗಳಲ್ಲೇ ಮಾಡಿ, ಆ ನೀರನ್ನು ನಿಮ್ಮ ಮನೆಯ ಸುತ್ತಿನ ಗಿಡಗಳಿಗೆ ಹಾಕಿ, ಆಗ ಪರಿಸರ ಉಳಿಸಬಹುದು ಮತ್ತು ಕೆರೆಗಳ ನೈರ್ಮಲ್ಯ ಕಾಪಾಡಬಹುದು ಎಂದು ಮನವಿ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: