ಮೈಸೂರು

ಗೌರಿಶಂಕರ ನಗರದಲ್ಲಿ ಹಸು ಮತ್ತು ಕರುವಿನ ಮೇಲೆ ಚಿರತೆ ದಾಳಿ : ಸೆರೆ ಹಿಡಿಯುವಂತೆ ಮನವಿ

ಮೈಸೂರು,ಸೆ.12:- ಮೈಸೂರಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು,   ಗೌರಿಶಂಕರ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ನಿನ್ನೆ ಸಂಜೆ 6.30ರ ವೇಳೆಗೆ ಗೌರಿಶಂಕರ ನಗರದಲ್ಲಿ  ಹಸು ಮತ್ತು ಕರುವಿನ ಮೇಲೆ  ಚಿರತೆ ದಾಳಿ ನಡೆಸಿದೆ. ಚಿರತೆ ಹಾವಳಿಯಿಂದ ಗೌರಿಶಂಕರ ನಗರದ ಜನತೆ ಬೆಚ್ಚಿ ಬಿದ್ದಿದ್ದು,ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಒಂದು ತಿಂಗಳಲ್ಲಿ ಎರಡು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಈ ಹಿಂದೆ ಎಂಟು ಚಿರತೆಗಳನ್ನು  ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಪದೇ ಪದೇ ಜನರಿಗೆ ತೊಂದರೆ ಕೊಡುತ್ತಿರುವ ಚಿರತೆ ಸೆರೆ ಹಿಡಿಯುವಂತೆ ಗೌರಿಶಂಕರ ನಗರ ನಿವಾಸಿಗಳು ಮನವಿ ಮಾಡಿದ್ದಾರೆ.

ಗೌರಿಶಂಕರ ನಗರದಲ್ಲಿ  ಮುಳ್ಳುಹಂದಿಯೂ ಸಹ ಕಾಣಿಸಿಕೊಂಡಿದೆ. ಮೊನ್ನೆ ರಾತ್ರಿಯಿಂದ ಮುಳ್ಳುಹಂದಿ ರಾಜಾರೋಷವಾಗಿ ಬಡಾವಣೆ ಒಳಗೆ ತಿರುಗಾಡುತ್ತಿದ್ದು,  ಮುಳ್ಳುಹಂದಿ‌ ಮತ್ತು ಚಿರತೆಯ ಹಾವಳಿಯನ್ನು ತಪ್ಪಿಸುವಂತೆ ಜನರು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: