ಮೈಸೂರು

ಕಟ್ಟೆಮಳಲವಾಡಿಯಲ್ಲಿ “ಜನಪರ ಉತ್ಸವ” ಡಿ.26ಕ್ಕೆ

ಪರಿಶಿಷ್ಟ ಜಾತಿಯ ಕಲಾವಿದರುಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿ ಅವರನ್ನು ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2016-17 ನೇ ಸಾಲಿನ ವಿಶೇಷ ಉಪಯೋಜನೆಯಡಿಯಲ್ಲಿ ಡಿ. 26ರಂದು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ “ಜನಪರ ಉತ್ಸವ” ಆಯೋಜಿಸಲಾಗಿದೆ.

ಜಿಲ್ಲೆಯ ಪರಿಶಿಷ್ಟ ಕಲಾವಿದರ 18 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರು ಡಿ.26ರ ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಹುಣಸೂರು ಶಾಸಕರಾದ ಎಚ್.ಪಿ. ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮ ಇಡೀ ದಿನ ನಡೆಯಲಿದೆ.

Leave a Reply

comments

Related Articles

error: