ಮನರಂಜನೆ

“ಡಾ.ರಾಜ್ ಹಿಂದಿಗೆ ಬಂದಿದ್ರೆ ನಮಗೆ ಅವಕಾಶ ಸಿಗ್ತಿರಲಿಲ್ಲ..”: ತಂದೆಯ ಮಾತು ನೆನೆದ ಅಭಿಷೇಕ್ ಬಚ್ಚನ್

ಬೆಂಗಳೂರು (ಸೆ.12): ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾತನಾಡಿರುವ ಅಭಿಷೇಕ್ ”ನಾನು ಚೆನೈನಲ್ಲಿ ಹೆಚ್ಚು ಇದ್ದೇ. ಅಲ್ಲಿ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ನಾನು ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂನ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಎಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನಟ ಅಭಿಷೇಕ್ ‘ಮನ್ ಮರ್ಜಿಯಾ’ ಎಂಬ ಹೊಸ ಸಿನಿಮಾ ಮಾಡಿದ್ದು, ಅವರ ಪ್ರಚಾರಕ್ಕಾಗಿ ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೌತ್ ಸಿನಿಮಾಗಳ ಬಗ್ಗೆ ಮಾತನಾಡಿದ ಅವರು ರಾಜ್ ಕುಮಾರ್ ಅವರ ಗುಣಗಾನ ಮಾಡಿದರು. ‘ನಮ್ಮ ತಂದೆಗೆ ರಾಜ್ ಕುಮಾರ್ ಅಂದರೆ ತುಂಬ ಇಷ್ಟ’ ಎಂದು ಹೇಳಿದರು.

ಇದೇ ವೇಳೆ ತಮ್ಮ ತಂದೆಯಾದ ಅಮಿತಾಭ್ ಬಚ್ಚನ್ ಅವರು ಕನ್ನಡಿಗರ ವರನಟ ಡಾ.ರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದರು ಎಂದು ಅಭಿಷೇಕ್ ಸ್ಮರಿಸಿದ್ದಾರೆ. ರಾಜ್ ಕುಮಾರ್ ಕಲಾ ದೇವಿಯ ಪುತ್ರ. ಅವರ ಪ್ರತಿಭೆ ಬಗ್ಗೆ ಬರೆಯುವುದು ಹೇಗೆ? ಅದನ್ನು ನೋಡಬೇಕು. ಅನುಭವಿಸಬೇಕು. ರಾಜ್ ಕುಮಾರ್ ಅವರ ನಟನೆಯನ್ನು ತುಂಬ ಮೆಚ್ಚಿಕೊಂಡಿದ್ದ ನಟರಲ್ಲಿ ಅಮಿತಾಭ್ ಬಚ್ಚನ್ ಪ್ರಮುಖರು. ಇನ್ನು ಕನ್ನಡ ಚಿತ್ರಂಗ ಗಂಧದಗುಡಿಯಲ್ಲಿ ಇದ್ದ ರಾಜ್ ಅವರಿಗೂ, ಬಾಲಿವುಡ್ ನಲ್ಲಿ ಇದ್ದ ಬಚ್ಚನ್ ರಿಗೂ ಒಳ್ಳೆಯ ಸ್ನೇಹ ಇತ್ತು.

ಅಮಿತಾಭ್ ಬಚ್ಚನ್ ಭಾರತ ಚಿತ್ರರಂಗ ಕಂಡ ಮಹಾನ್ ನಟರಲ್ಲಿ ಒಬ್ಬರು. ಲಕ್ಷಾಂತರ ಅಭಿಮಾನಿಗಳ ಪಾಲಿನ ಸೂಪರ್ ಹೀರೋ ಅಮಿತಾಭ್ ಬಚ್ಚನ್. ಹೀಗಿರುವಾಗ ಇಂತಹ ದೈತ್ಯ ನಟ ಫ್ಯಾನ್ ಆಗಿದ್ದು, ಕರುನಾಡ ಪುತ್ರ ರಾಜಣ್ಣನಿಗೆ. ಈ ವಿಷಯವನ್ನು ಮತ್ತೆ ಈ ನೆನಪು ಮಾಡಿದ್ದು ಬಚ್ಚನ್ ಪುತ್ರ. ಇತ್ತೀಚಿಗಷ್ಟೆ ನಟ ಅಭಿಷೇಕ್ ಬಚ್ಚನ್ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಟ ರಾಜ್ ಕುಮಾರ್ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನನ್ನ ತಂದೆ ನನಗೆ ರಾಜ್ ಕುಮಾರ್ ಸರ್ ಅವರನ್ನು ಪರಿಚಯ ಮಾಡಿಸಿದ್ದರು. ಆಗ ನಾನು ಸಣ್ಣ ಹುಡುಗನಾಗಿದ್ದೆ. ‘ನಾನು ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್’ ಎಂದು ನನ್ನ ತಂದೆಯೇ ಹೇಳಿಕೊಂಡಿದ್ದಾರೆ. ರಾಜ್ ಕುಮಾರ್ ಅವರ ನಟನೆ ಅಂದರೆ ನಮ್ಮ ತಂದೆಗೆ ತುಂಬ ಇಷ್ಟ. ರಾಜ್ ಕುಮಾರ್ ಅವರ ಮಕ್ಕಳೂ ಸಹ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಎಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅಭಿಷೇಕ್ ಬಚ್ಚನ್ ಮಾತಾಡಿದ್ದಾರೆ.

ರಾಜ್ ಕುಮಾರ್ ಅವರ ಪ್ರತಿಭೆ ಬಗ್ಗೆ ಒಮ್ಮೆ ಮಾತನಾಡಿದ್ದ ಅಮಿತಾಭ್ ಬಚ್ಚನ್, ರಾಜ್ ಕುಮಾರ್ ಅವರು ಹಿಂದಿ ಚಿತ್ರರಂಗಕ್ಕೆ ಬರದೆ ಇದ್ದದ್ದು ಒಳ್ಳೆಯದಾಯಿತು. ಒಂದು ವೇಳೆ ಏನಾದರೂ ಅವರು ಹಿಂದಿಗೆ ಬಂದಿದ್ದರೆ ನಾವ್ಯಾರೂ ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಲೇ ಇರಲಿಲ್ಲ. ನಮಗೆ ಸಿನಿಮಾಗಳು ಸಿಗುತ್ತಿರಲಿಲ್ಲ! ಎಂದು ಹೇಳಿದ್ದನ್ನು ನೆನಪಿಸಿಕೊಂಡ ಅಭಿಷೇಕ್, ಕನ್ನಡದ ಮೇರು ನಟನಿಗೆ ಗೌರವ ಸಲ್ಲಿಸಿದರು.

ಡಾ.ರಾಜ್ ಅವರಿಗೆ ಆಪ್ತರಾಗಿದ್ದ ಬಿಗ್ ಬಿ, ಅವರ ಇಡೀ ಕುಟುಂಬದ ಜೊತೆಗೆ ಈಗಲೂ ಒಳ್ಳೆಯ ಸಂಬಂಧ ಕಾಪಾಡಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: