ವಿದೇಶ

ಅಪ್ಪಳಿಸಲಿದೆ `ಫ್ಲೊರೆನ್ಸ್’ ಚಂಡಮಾರುತ: ಒಂದು ಮಿಲಿಯನ್ ಗೂ ಅಧಿಕ ಜನರ ಸ್ಥಳಾಂತರ

ವಿಲ್ಮಿಂಗ್ಟನ್,(ಅಮೆರಿಕಾ),ಸೆ.12-ಅಮೆರಿಕಾದ ಉತ್ತರ ಕ್ಯಾರೊಲಿನಾಕ್ಕೆ ಭಿಕರ ಚಂಡಮಾರುತ ಅಪ್ಪಳಿಸಲಿದ್ದು, ಮುನ್ಸೂಚನೆಯಾಗಿ ವಿಲ್ಮಿಂಗ್ಟನ್ ನ ಒಂದು ಮಿಲಿಯನ್ ಗೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ವಿಲ್ಮಿಂಗ್ಟನ್ ನ ಕರಾವಳಿ ತೀರದ ಸುಮಾರು 300 ಮೈಲುಗಳಷ್ಟು ಜಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ಭಾಗದಲ್ಲಿ `ಫ್ಲೊರೆನ್ಸ್’ ಚಂಡಮಾರುತ ಉಂಟಾಗಲಿದೆ.

ಉತ್ತರ ಕ್ಯಾರೋಲಿನಾ, ದಕ್ಷಿಣ ಕ್ಯಾರೋಲಿನಾ, ವರ್ಜಿನಿಯಾ ಸೇರಿದಂತೆ ಹಲವೆಡೆಗಳಲ್ಲಿ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗುತ್ತಿದೆ.

ಈ ಚಂಡಮಾರುತ ಸಾಕಷ್ಟು ವೇಗವಾಗಿ ಸಂಚರಿಸುವ ಕಾರಣ ಹಲವು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಮುಚ್ಚರಿಕೆ ವಹಿಸಲಾಗಿದೆ.

ನ್ಯಾಶ್ನಲ್ ಓಶ್ಯಾನೆಟಿಕ್ ಅಟ್ಮಾಸ್ಫಿರಿಕ್ ಅಡ್ಮಿನಿಸ್ಟ್ರೇಶನ್ ಸೆಟಲೈಟ್, ಸಮುದ್ರದ ಸಲೆಗಳ ನಡುವಲ್ಲಿ ಏಳುತ್ತಿರುವ ಈ ಚಂಡಮಾರುತದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಆತಂಕ ಸೃಷ್ಟಿಸಿದೆ. (ಎಂ.ಎನ್)

Leave a Reply

comments

Related Articles

error: