ಕರ್ನಾಟಕ

ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು: ಡಾ. ಪ್ರದೀಪ್ ಕುಮಾರ್ ಹೆಬ್ರಿ

ಮಂಡ್ಯ (ಸೆ.12): ಪ್ರತಿಯೊಬ್ಬರು ಸಮಯ ಪಾಲನೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದು ವಿಶೇಷ ಉಪನ್ಯಾಸ ನೀಡಿದ ಸಾಹಿತಿಗಳಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಐತಿಹಾಸಿಕ ಉಪನ್ಯಾಸದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು.

ವಿಶ್ವ ವೇದಿಕೆಯಲ್ಲಿ ಜಾತಿ, ಧರ್ಮ ಮರೆತು ವಿಶ್ವ ಧರ್ಮ ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾಷಣ ಭೂತ, ಭವಿಷ್ಯ, ವರ್ತಮಾನದ ದಿನಗಳಿಗೆ ಪ್ರಸ್ತುತ ಎನಿಸಿದೆ. ಧರ್ಮ ನಿಷ್ಠೆ ಎಂದರೆ ಇತರರನ್ನು ಕರುಣೆಯಿಂದ ಕಾಣುವುದು ಮತ್ತು ಅನ್ಯರ ಅನ್ನಕ್ಕೆ ದಾರಿ ಮಾಡಿಕೊಡುವುದಾಗಿದೆ ಎಂಬ ವಿವೇಕವಾಣಿಯನ್ನು ಪ್ರತಿಯೊಬ್ಬರು ಅರಿತು ಮನಸ್ಸು ಗೆಲ್ಲುವ ಶಕ್ತಿ ಹೊಂದಬೇಕು ಎಂದರು.

1893 ಸೆ.11ರಿಂದ 27ರವರೆಗೆ ಚಿಕ್ಯಾಗೋ ಕೊಲಂಬಿಯನ್ ಜಾಗತಿಕ ಮೇಳದ ಅಂಗವಾಗಿ ನಡೆದ ವಿಶ್ವ ಧರ್ಮ ಸಮ್ಮೇಳನವು ಪ್ರಪಂಚದ ಇತಿಹಾಸದಲ್ಲೇ ಮಹತ್ವ ಪೂರ್ಣ ಘಟನೆಯಾಗಿದೆ. 800 ವರ್ಷಗಳ ಹಿಂದೆ ಬಸವಣ್ಣ ಅವರು ವಚನ ಕ್ರಾಂತಿ ಮೂಲಕ ಮನುಕುಲದ ಲೇಸು ಬಯಸಿದಂತೆ ಸ್ವಾಮಿ ವಿವೇಕಾನಂದರು ಭಾಷಣದ ಮೂಲಕ ದೇಶ, ಕಾಲಗಳ ಮಿತಿ ಇಲ್ಲದೆ ವಿಶ್ವ ಧರ್ಮದ ಒಳಿತು ಬಯಸಿದರು. ಜಗತ್ತಿಗೆ ಸಹಿಷ್ಣುತೆಯನ್ನು, ಸರ್ವ ಧರ್ಮ ಸ್ವೀಕಾರ ಭಾವವನ್ನು ಬೋಸಿದ ಹಿಂದೂ ಧರ್ಮದ ಪ್ರತಿನಿಯಾಗಿ ಎಲ್ಲರ ಮನಗೆದ್ದು ಇತಿಹಾಸ ನಿರ್ಮಿಸಿದರು ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ನಾಗರತ್ನಸ್ವಾಮಿ ಅವರು ಮಾತನಾಡಿ, ಮನುಕುಲಕ್ಕೆ ಆದರ್ಶಪ್ರಾಯರಾದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಸಮುದಾಯ ತಿಳಿಯಬೇಕು. ಕಾಲ್ನಡಿಗೆ ಮೂಲಕ ಇಡೀ ಭಾರತ ದೇಶ ಸುತ್ತಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತ ವಿವೇಕಾನಂದರ ಬದುಕೇ ಭಾರತದ ಚಿತ್ರಣವಾಗಿದೆ ಎಂದರು.

ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಕೆ.ಸುರೇಶ್‍ಗೌಡ, ರವೀಂದ್ರ ಶ್ರೀಕಂಠಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಜ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ, ಅಪರ ಜಿಲ್ಲಾಕಾರಿ ಬಿ.ಪಿ.ವಿಜಯ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: