ಮೈಸೂರು

ಹಿಂದೂ ಮುಸ್ಲಿಂ ಯುವಕರಿಂದ ಗಣೇಶ ಹಬ್ಬ ಆಚರಣೆ : ಸೌಹಾರ್ದತೆ ಮೆರೆದ ಯುವಕರು

ಮೈಸೂರು,ಸೆ.12:- ನಾಡಿನೆಲ್ಲೆಡೆ ಗಣೇಶ ಹಬ್ಬವನ್ನು  ಸಡಗರದಿಂದ ಆಚರಿಸಲಾಗುತ್ತಿದೆ. ಮೈಸೂರಿನ ಪರಿವರ್ತನ ಟ್ರಸ್ಟ್ ವತಿಯಿಂದ ವಿನೂತನವಾಗಿ ಹಬ್ಬ ಆಚರಿಸಲಾಗಿದೆ. ಹಿಂದೂ ಮುಸ್ಲಿಂ ಯುವಕರು ಒಂದಾಗಿ ಗಣೇಶನ ಹಬ್ಬವನ್ನು ಆಚರಿಸಿದ್ದಾರೆ.

ಅಗ್ರಹಾರದ ವೃತ್ತದಲ್ಲಿರುವ ಕಚೇರಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಪರಸ್ಪರ ಗಣೇಶ ಹಾಗೂ  ಮೊಹರ೦ ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶ ರವಾನಿಸಿದ್ದಾರೆ. ಗಣೇಶನ ಹಬ್ಬ ಒಟ್ಟಿಗೆ ಆಚರಿಸುವ ಮೂಲಕ ನಾವೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.

ಈ ಸಂದರ್ಭ  ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ ಭಾರತ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುವುದು ಹಿಂದೂ ಮತ್ತು ಮುಸಲ್ಮಾನ್ ಧರ್ಮ ಸಂಪ್ರದಾಯವಾಗಿದೆ .ಮೇಲಾಗಿ ಈ ಬಾರಿ ಗೌರಿ ಗಣೇಶ ಮತ್ತು ಮೊಹರಂ ಹಬ್ಬ ಒಟ್ಟಾಗಿ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು  ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆ ಯಿಂದ  ಬಾಳ ಬೇಕಾಗಿದೆ. ಈ ನಾಡಿನ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ .ಆದರೆ ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡುವ ಉದ್ದೇಶದಿಂದ ಎರಡೂ ಸಮುದಾಯಗಳಲ್ಲಿ ಏನಾದರೂ ಸುಳ್ಳು ಸುದ್ದಿ ಹರಡಿಸಿ ಅಹಿತರ ಘಟನೆಗಳು ನಡೆಯುವ ಹಾಗೆ ಮಾಡುತ್ತಾರೆ. ಅದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ  ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣುತ್ತದೆ ಎಂದರು.

ಶ್ರೀಕರ ಪರಮಪೂಜ್ಯ ಸ್ವಾಮೀಜಿ, ಪರಿವರ್ತನ೦ ಟ್ರಸ್ಟ್ ನ ಅಧ್ಯಕ್ಷ ವಿನಯ್ ಕಣಗಾಲ್,ಹಿರಿಯ ಕಲಾವಿದರಾದ ಮೈಕ್ ಚಂದ್ರು, ಅದಿತ್ರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸೌಭಾಗ್ಯ, ಕಾರ್ಯದರ್ಶಿ ಅಮ್ರಿನ್ ತಾಜ್,ಅರವಿಂದ್, ದಿಲೀಪ್,ರಂಜಿತ್ ಪ್ರಸಾದ್, ಮುಸಲ್ಮಾನ್ ಯುವಕರುಗಳಾದ ಖುಸ್ರು, ಅಬ್ರಾರ್,ನಾಸೀರ್ ಬಾಷಾ, ಜಮೀರ್ ಪಾಷಾ, ಅನ್ಸರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: