ಕರ್ನಾಟಕ

ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ಸಹಾಯ ಧನ : ಅರ್ಜಿ ಆಹ್ವಾನ

ಮಂಡ್ಯ (ಸೆ.12): ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ 2018-19ನೇ ಸಾಲಿನಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದ ಸ್ವಯಂ ಉದ್ಯೋಗ, ಗುಂಪು ಉದ್ಯೋಗ ಕಾರ್ಯಕ್ರಮ, ಮಹಿಳಾ ಸ್ವ ಸಹಾಯ ಸಂಘ ರಚಿಸಲು ಶೇ.24.10ರ ಯೋಜನೆಯಡಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಸಹಾಯಧನ ನೀಡಲು. ಶೇ.7.25 ಯೋಜನೆಯಡಿ ಯಶಸ್ವಿನಿ ಯೋಜನೆಯ ದರದಂತೆ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡಲು.

ಶೇ.3ರ ಯೋಜನೆಯಡಿಯಲ್ಲಿ ದೈಹಿಕ ವಿಕಲಚೇತನರಿಗೆ ದ್ವಿಚಕ್ರ ಮೋಟರ್ ವಾಹನ ಸೌಲಭ್ಯ ನೀಡಲು ಹಾಗೂ ವಿಕಲ ಚೇತನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನೊಂದಾಯಿತ ಸರ್ಕಾರೇತರ ಸಂಸ್ಥೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಹೆಚ್ಚು ಅರ್ಜಿ ಬಾರದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 30 ರವರೆಗೆ ವಿಸ್ತರಿಸಲಾಗಿದೆ.

ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಮುಖ್ಯಾಧಿಕಾರಿ, ಪುರಸಭೆ ಮದ್ದೂರು ಇವರಿಗೆ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮುಖ್ಯಾಧಿಕಾರಿ, ಪುರಸಭೆ, ಮದ್ದೂರು ಇವರನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: