ಮೈಸೂರು

ದೋಣಿ ಮಗುಚಿ ವ್ಯಕ್ತಿ ಸಾವು

ಮೈಸೂರು,ಸೆ.12:- ದೋಣಿ ಮಗುಚಿದ ಪರಿಣಾಮ ವ್ಯಕ್ತಿಯೋರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆಯ ತಾಲೂಕಿನ ಡಿ.ಬಿ‌.ಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು  ಕೇರಳ ಮೂಲದ ಜೇಮ್ಸ್(38)  ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹ  ಮೇಲಕ್ಕೆತ್ತಿದ್ದಾರೆ.

ಜೇಮ್ಸ್ ಬಿದ್ದಿರುವ ಸ್ಥಳದಿಂದ ಬಾರ್  ನೂರು ಮೀಟರ್  ದೂರದಲ್ಲಿದ್ದು ಜೇಮ್ಸ್  ಸಾವನ್ನಪ್ಪಿರುವುದಕ್ಕೆ ಕುಡಿತದ ವ್ಯಸನವೇ ಕಾರಣವೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಪ್ರತಿನಿತ್ಯವೂ ಈ ಬಾರ್ ನಿಂದ ಏಳು ಗಂಟೆಗೆ ಮದ್ಯ ದೊರೆಯುವುದರಿಂದ ಹೆಚ್ಚಿಗೆ ಅನಾಹುತ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: