ಕರ್ನಾಟಕ

ಲಘು ವಾಹನ ತರಬೇತಿಗಾಗಿ ಐ.ಟಿ.ಐ.ನಿಂದ ಅರ್ಜಿ ಆಹ್ವಾನ

ಬೆಂಗಳೂರು (ಸೆ.12): ನಗರದ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2018-19ನೇ ಸಾಲಿನ ಎಂ.ಡಿ.ಟಿ.ಎಸ್. ನಲ್ಲಿ ಲಘುವಾಹನ (LMV) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶಕ್ಕಾಗಿ ಅರ್ಜಿಗಳನ್ನು ದಿನಾಂಕ: 17-09-2018 ರಿಂದ ದಿನಾಂಕ: 10-10-208 ರವರೆಗೆ ವಿತರಿಸಲಾಗುವುದು. ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 15-10-2018 ಅಂತಿಮ ದಿನವಾಗಿರುತ್ತದೆ. ದಿನಾಂಕ: 22-10-2018 ರಂದು ಪ್ರವೇಶಾತಿಗೆ ಸಮಾಲೋಚನೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರನ್ನು ದೂರವಾಣಿ ಸಂಖ್ಯೆ 080-26562307 ಅನ್ನು ಸಂಪರ್ಕಿಸಬಹುದಾಗಿದೆ.

ಅಭ್ಯರ್ಥಿಯು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಲಘುವಾಹನ (LMV) ಚಾಲನೆ ತರಬೇತಿಗೆ ಸೇರಲು ಅಭ್ಯರ್ಥಿಯ ವಯಸ್ಸು 18 ರಿಮದ 40 ವರ್ಷಗಳ ವಯೋಮಿತಿಯೊಳಗಿರಬೇಕು. ಸಂಬಂಧಿಸಿದ ಅಭ್ಯರ್ಥಿಗಳು ಸಂಸ್ಥೆಯ ಪ್ರಾಂಶುಪಾಲರ ಅಧ್ಯಕ್ಷತೆಯನ್ನೊಳಗೊಂಡ ಹಾಗೂ ತರಬೇತಿ ಅಧಿಕಾರಿ ಮತ್ತು ಕಿರಿಯ ತರಬೇತಿ ಅಧಿಕಾರಿಗಳ ಸದಸ್ಯತ್ವದಿಂದ ರಚಿಸಿದ ಸಮಿತಿಯ ಮೂಲಕ ಅಭ್ಯರ್ಥಿಯನ್ನು ನಿಯಮಾನುಸಾರ ಆಯ್ಕೆಮಾಡಲಾಗುವುದು.

ಲಘುವಾಹನ (LMV) ತರಬೇತಿಗೆ ಒಬ್ಬ ಅಭರ್ಥಿಗೆ ತಗಲುವ ಪ್ರವೇಶ ಶುಲ್ಕ ರೂ 1000 (ರೂ. ಒಂದು ಸಾವಿರ ರೂಪಾಯಿಗಳು ಮಾತ್ರ) ಹಾಗೂ ಅರ್ಜಿ ಶುಲ್ಕ ರೂ 50/- (ರೂ. ಐವತ್ತು ರೂಪಾಯಿಗಳು ಮಾತ್ರ) ತರಬೇತಿಯ ಅವಧಿ (ನಾಲ್ಕುವಾರಗಳು – 30 ದಿನಗಳು) ತರಬೇತಿ ಸಂದರ್ಭದಲ್ಲಿ ಅಭ್ಯರ್ಥಿಯು ತನ್ನ ಸ್ವಂತ ಖರ್ಚಿನಲ್ಲಿ R.T.O. fees (LL&DL) ಅನ್ನು ಭರಿಸತಕ್ಕದ್ದು. (ಎನ್.ಬಿ)

Leave a Reply

comments

Related Articles

error: