ಸುದ್ದಿ ಸಂಕ್ಷಿಪ್ತ

ಸೆ.15ರಂದು ಹೃದಯ ಹಾಗೂ ಚರ್ಮ ರೋಗ ತಪಾಸಣಾ ಶಿಬಿರ

ಮೈಸೂರು,ಸೆ.12 : ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ವೈಫಲ್ಯ ಕ್ಲಿನಿಕ್ ಅನ್ನು ಸೆ.15ರ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಏರ್ಪಡಿಸಲಾಗಿದೆ. ಹಿರಿಯ ಹೃದ್ರೋಗ ಹಾಗೂ ಹೃದಯ ಕಸಿ ತಜ್ಞ ಡಾ.ನಾಗಮಲ್ಲೇಶ್ ಅವರು ಲಭ್ಯವಿರಲಿದ್ದಾರೆ.

ಸ್ಕಿನ್ ಕೇರ್ ಕ್ಲಿನಿಕ್ : ಮೊಡವೆ, ಕೂದಲು, ಶಿಲೀಂದ್ರಗಳ ಸೋಂಕು, ತೊನ್ನು, ಸೋರಿಯಾಸಿಸ್, ಎಸ್ಜಿಮಾ ಮುಂತಾದ ಚರ್ಮ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೆ.15ರ ಬೆಳಗ್ಗೆ 10 ರಿಂದ 3 ಗಂಟೆವರೆಗೆ ಹಲವು ಚರ್ಮ ವ್ಯಾದಿಗಳಿಗೆ ಕ್ಲಿನಿಕ್ ಅನ್ನು ನಡೆಸಲಾಗುತ್ತಿದೆ, ಹೆಸರು ನೋಂದಾಯಿಸಿಕೊಳ್ಳಲು ಮೊ.ಸಂ.95380 52378 ಸಂಪರ್ಕಿಸಬಹುದಾಗಿದೆ ಎಂದು ಮಾರುಕಟ್ಟೆ ವ್ಯವಸ್ಥಾಪಕ ಕೆ.ವಿ.ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: