ಕರ್ನಾಟಕ

ಕೊನೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದವ ಈಗ ಐಪಿಎಸ್ ಅಧಿಕಾರಿ

ಬೆಂಗಳೂರು,ಸೆ.12-ಶಾಲಾ ದಿನಗಳಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಜಿ.ಕೆ.ಮಿಥುನ್ ಕುಮಾರ್ ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಮಿಥುನ್ ಕುಮಾರ್ ನಾಲ್ಕು ವಿಫಲ ಯತ್ನಗಳ ನಂತರ 2016ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 130ನೇ ರ್ಯಾಂಕ್ ಗಳಿಸಿದ್ದಾರೆ.

ಮಿಥುನ್ ಐಎಎಸ್ ಅಧಿಕಾರಿಯಾಗಬಹುದಾಗಿದ್ದರೂ ಅವರು ಯಾವತ್ತೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ತಮ್ಮ ಆ ಕನಸನ್ನು ಕಠಿಣ ಶ್ರಮದಿಂದ ನನಸಾಗಿಸಿದ್ದಾರೆ.

ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ಮಿಥುನ್ ಪದವಿ ಪೂರೈಸಿದ ಕೂಡಲೇ ಕುಟುಂಬ ನಿರ್ವಹಣೆ ಉದ್ದೇಶದಿಂದ  ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆದರೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಅವರು ಕೈಬಿಟ್ಟಿರಲಿಲ್ಲ. ಅವರ ಈ ಆಸೆಗೆ ನೀರೆರೆದು ಪೋಷಿಸಿದವರು ಅವರ ತಂದೆ. ಮೂರು ವರ್ಷ ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿದ ಅವರು ತಮ್ಮ ಸೋದರ ಕುಟುಂಬದ ಜವಾಬ್ದಾರಿ ವಹಿಸಿಕೊಂಡ ನಂತರ ಉದ್ಯೋಗ ತೊರೆದು ಯುಪಿಎಸ್‍ಸಿ ಪರೀಕ್ಷೆಯತ್ತ ಗಮನ ಹರಿಸಿದ್ದರು.

ಪೊಲೀಸ್ ಸಮವಸ್ತ್ರ ಅವರನ್ನು ಸದಾ ಆಕರ್ಷಿಸುತ್ತಿತ್ತು. ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೋಡಿದಾಗಲೆಲ್ಲಾ ತಾನೂ ಅವರಂತೆಯೇ ಆಗಬೇಕೆಂಬ ಕನಸನ್ನು ಹೊತ್ತುಕೊಂಡಿದ್ದ ಮಿಥುನ್ ತಮ್ಮ ಕನಸಿನಂತೆಯೇ ಪೊಲೀಸ್ ಅಧಿಕಾರಿಯಾಗಿದ್ದಾರೆ. (ಎಂ.ಎನ್)

 

Leave a Reply

comments

Related Articles

error: