ಮೈಸೂರು

ರಾಜಕೀಯ ನಾಯಕರ ಜತೆ ವಿಘ್ನವಿನಾಶಕ ಗಣೇಶ : ಕಲಾವಿದನ ಕೈಯ್ಯಲ್ಲರಳಿ ಗಮನ ಸೆಳೆದ ಕಲೆ

ಮೈಸೂರು,ಸೆ.14:- ನಾಡಿನಾದ್ಯಂತಗೌರಿ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು, ಗೌರಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಶಾಂತಿ ಸೌಹಾರ್ದತೆಯಿಂದ ಆಚರಿದ್ದಾರೆ .ಈ ಹಬ್ಬದಲ್ಲಿ ಗಣೇಶನ ಮೂರ್ತಿಗಳನ್ನು  ತಯಾರಿಸುವುದು ಒಂದು ಕಲೆ.  ಈ ಕಲೆಯನ್ನುಮೈಸೂರಿನಲ್ಲಿ ಕಲಾವಿದರೊಬ್ಬರು ಬಳಸಿಕೊಂಡು ತಮ್ಮ ಕೈಚಳಕದಲ್ಲಿ ವಿಭಿನ್ನ ರೀತಿಯ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದರು.

ಮೈಸೂರಿನ ಕಲಾವಿದ ರೇವಣ್ಣ ಎಂಬವರ ಕೈಯಲ್ಲಿ ರಾಜಕೀಯ ನಾಯಕರ ಜತೆ ವಿಘ್ನವಿನಾಶಕ ಗಣೇಶನಿರುವ ಮೂರ್ತಿಗಳು ವಿಭಿನ್ನ ರೀತಿಯಲ್ಲಿ ಅರಳಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸಿವೆ.  ಇತ್ತೀಚೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ರೈತರ ಜಮೀನಿನಲ್ಲಿ ನಾಟಿಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಈ ಪ್ರಸಂಗವನ್ನು ಬಳಸಿಕೊಂಡಿರುವ ಕಲಾವಿದ ರೇವಣ್ಣ ಅವರು ಗಣೇಶ ಸಿಎಂ ಹೆಚ್.ಡಿ ಕುಮಾರಸ್ವಾಮಿಯೊಂದಿಗೆ ನಾಟಿ ಮಾಡುವ ಹಾಗೆಯೇ ಮೂರ್ತಿಯನ್ನು ರಚಿಸಿದ್ದರು. ಮಾಜಿ ರಾಷ್ಟ್ರಪತಿ  ಡಾ.ಎಪಿಜೆ ಅಬ್ದುಲ್ ಕಲಾಂ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ ಮಧ್ಯೆ ಗಣೇಶ ನಿಂತಿರುವ ರೀತಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂಬ ಸಂದೇಶ ಸಾರುವ ಹಾಗೇ ಗಣೇಶ ಮತ್ತು ಪ್ರಧಾನಿ ಮೋದಿ ಅವರು ಬಾವುಟವನ್ನು ಹಿಡಿದಿರುವುದು ಹೀಗೆ ವಿಭಿನ್ನ ರೀತಿಯಲ್ಲಿ  ಏಕದಂತನ ಮೂರ್ತಿಯು ಕಲಾವಿದ ರೇವಣ್ಣ ಅವರ ಕೈಯಲ್ಲಿ ಮೂಡಿಬಂದಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: