ಮೈಸೂರು

ಗಣೇಶ ಚತುರ್ಥಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ಗಜಪಡೆಗೆ ವಿಶೇಷ ಪೂಜೆ

ಮೈಸೂರು,ಸೆ.14:- ಗಣೇಶ ಚತುರ್ಥಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಿನ್ನೆ ಪೂಜೆಗೂ ಮುನ್ನ ಬೆಳಿಗ್ಗೆ ಎಂದಿನಂತೆ ಗಜಪಡೆ ಕ್ಯಾಪ್ಟನ್ ಅರ್ಜುನ ನೇತೃತ್ವದ  ವರಲಕ್ಷ್ಮೀ, ಚೈತ್ರ, ವಿಕ್ರಮ, ಧನಂಜಯ  ಆನೆಗಳಿಗೆ ತಾಲೀಮು ನಡೆಸಿ ನಂತರ ಅರಮನೆ ಆವರಣದಲ್ಲಿ ಸ್ನಾನ ಮಾಡಿಸಲಾಯಿತು. ನಂತರ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪುರೋಹಿತ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಮಂಗಳಾರತಿ ಮಾಡಿ ವಿಘ್ನ ನಿವಾರಕರನ್ನು ಸ್ಮರಿಸಲಾಯಿತು. ಆನೆಗಳಿಗೆ ಪೂಜೆ ಸಲ್ಲಿಸಿ, ಬೆಲ್ಲ, ಕಬ್ಬು ಹಣ್ಣುಗಳನ್ನು ನೀಡಿ ಕುಂಬಳ ಕಾಯಿ‌ ಒಡೆದು ನಮಸ್ಕರಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗಜಪಡೆಗೆ ಆರತಿ ಬೆಳಗಿದರು. ಈ ಸಂದರ್ಭ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: