ಪ್ರಮುಖ ಸುದ್ದಿ

ಎಮ್ಮೆ ಕಳ್ಳಿಯ ಬಂಧನ

ರಾಜ್ಯ(ಮಂಡ್ಯ)ಸೆ.14:- ಎಮ್ಮೆ ಕದ್ದು, ಮಾರಾಟ ಮಾಡಲು ಹೋಗಿದ್ದ ಮಹಿಳೆಯನ್ನು ಮಾಲು ಸಮೇತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ‌.

ಕೆ.ಆರ್.ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದ ಜಯಲಕ್ಷ್ಮಿ ಎಂಬಾಕೆಯೇ ಮಾಲು ಸಮೇತ ಸಿಕ್ಕ ಕಳ್ಳಿಯಾಗಿದ್ದು, ಈಕೆ ಜಗದೀಶ್ ಎಂಬವರ ಎಮ್ಮೆಯನ್ನು ಕದ್ದು ಹೊಡೆದುಕೊಂಡು ಹೋಗಿ ಮಾರಾಟ ಮಾಡಲು ಯತ್ನ ನಡೆಸಿದ್ದ ವೇಳೆ ಗ್ರಾಮಸ್ಥರು ಹಿಡಿದು ಕಿಕ್ಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: