ಕರ್ನಾಟಕ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಸಾಲ ಸೌಲಭ್ಯ

ಮಂಡ್ಯ (ಸೆ.14): ಮಂಡ್ಯ ಜಿಲ್ಲೆಯ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಉದ್ದಿಮೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ಕನಿಷ್ಠ ಮಿತಿ ರೂ 10 ಲಕ್ಷದಿಂದ ಗರಿಷ್ಠ ಮಿತಿ ರೂ.10 ಕೋಟಿವರೆಗೆ ಶೇ.4 ರ ಬಡ್ಡಿದರದಲ್ಲಿ ಸಾಲ, ಮೊದಲ ಪೀಳಿಗೆ ಉದ್ದಿಮೆದಾರರು ಹೊಸದಾಗಿ ಸ್ಥಾಪಿಸಲಿರುವ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ ಮಿತಿ ರೂ.5 ಲಕ್ಷದಿಂದ ಮತ್ತು ಗರಿಷ್ಠ ಮಿತಿ ರೂ.5 ಕೋಟಿವರೆಗೆ ಶೇ.8 ರ ಬಡ್ಡಿದರದಲ್ಲಿ ಹಾಗೂ ಮಹಿಳಾ ಉದ್ದಿಮೆದಾರರಿಗೆ ಕನಿಷ್ಠ ಮಿತಿ ರೂ.5 ಲಕ್ಷದಿಂದ ಗರಿಷ್ಠ ಮಿತಿ ರೂ.2 ಕೋಟಿವರೆಗೆ ಶೇ.4ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಸಂಸ್ಥೆಯ ನಿಯಮಗಳಿಗೆ ಒಳಪಟ್ಟು ನೀಡಾಗುವುದು.

ಹೆಚ್ಚಿನ ಮಾಹಿತಿಗೆ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಮಂಡ್ಯ ಅಥವಾ ದೂರವಾಣಿ ಸಂಖ್ಯೆ:08232-226745, 225496 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: