ಕರ್ನಾಟಕಪ್ರಮುಖ ಸುದ್ದಿ

ಚಿತ್ರಮಂದಿರಗಳ ಪರವಾನಗಿ ಮೊತ್ತ ಹೆಚ್ಚಳ: ಪ್ರದರ್ಶಕರಿಗೆ ಪ್ರತಿಕೂಲವಾಗುತ್ತಾ ಸರ್ಕಾರದ ನಿರ್ಧಾರ?

ಬೆಂಗಳೂರು (ಸೆ.14): ಕನ್ನಡ ಸಿನಿಮಾ ಪ್ರದರ್ಶಕರ ಸಂಘ ಈಗ ಹೊಸದೊಂದು ಸಂಕಟವನ್ನು ಎದುರಿಸುತ್ತಿದೆ. ಪ್ರಸಕ್ತ ವರ್ಷದಿಂದಲೇ ಕರ್ನಾಟಕ ಸರ್ಕಾರ, ಚಿತ್ರ ಮಂದಿರಗಳ ವಾರ್ಷಿಕ ಪರವಾನಗಿ ಮೊತ್ತವನ್ನು ಶೇಕಡಾ 350 ರಷ್ಟು ಹೆಚ್ಚಿಸಿದೆ. ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳ ಮಾಲೀಕರಿಗೂ ಈ ನಿಯಮ ಅನ್ವಯವಾಗಲಿದೆ.

ಕಳೆದ ಎರಡು ದಶಕಗಳಿಂದ ಕರ್ನಾಟಕ ಸಿನಿಮಾ ಮಂದಿರಗಳ ಮಾಲೀಕರು ತಮ್ಮ ವಾರ್ಷಿಕ ಪರವಾನಗಿ ಪಡೆಯಲು ಪ್ರತಿ ವರ್ಷ 100 ಸ್ಕ್ವೇರ್ ಮೀಟರ್’ಗೆ 1000 ರೂಪಾಯಿ ಪಾವತಿ ಮಾಡುತ್ತಿದ್ದರು. ಈ ವರ್ಷದಿಂದ ಪ್ರತಿ 100 ಸ್ಕ್ವೇರ್ ಮೀಟರ್‍ಗೆ 4500 ರೂಪಾಯಿ ಪಾವತಿ ಮಾಡಬೇಕಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಚಿತ್ರದ ಟಿಕೆಟ್ ಬೆಲೆಯಲ್ಲೂ ಏರಿಕೆ ಕಾಣುವ ಸಾಧ್ಯತೆ ಇದೆ.

ಆಗಸ್ಟ್ 30ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಸೂಚನೆಯ ಪ್ರಕಾರ 50 ಸ್ಕ್ವೇರ್ ಮೀಟರ್ ನಂತರದ ಪ್ರದೇಶಕ್ಕೆ ಹೆಚ್ಚುವರಿಯಾಗಿ 2500 ರೂಪಾಯಿಗಳನ್ನು ಪಾವತಿ ಮಾಡಬೇಕಿದೆ. ಮೊದಲು ಇದರ ಮೊತ್ತ 500 ರೂಪಾಯಿಗಳಿಗೆ ನಿಗದಿಯಾಗಿತ್ತು. ಈ ನಿಯಮದ ವಿರುದ್ಧ ಈಗ ಚಿತ್ರ ಪ್ರದರ್ಶಕರು ಅಸಮಾಧಾನಗೊಂಡಿದ್ದಾರೆ. 5000 ಸ್ಕ್ವೇರ್ ಮೀಟರ್ ಸಿನಿಮಾ ಮಂದಿರ ಇರುವ ಮಾಲೀಕರು ಮೊದಲು ತಮ್ಮ ಪರವಾನಗಿಗಾಗಿ ಪ್ರತಿ ಸ್ಕ್ವೇರ್ ಮೀಟರ್ ಗೆ 3000 ರೂಪಾಯಿ ಪಾವತಿಸುವ ಜಾಗದಲ್ಲಿ ಈಗ ಹೆಚ್ಚುವರಿಯಾಗಿ 20 ಸಾವಿರ ರೂಪಾಯಿ ಪಾವತಿಸಬೇಕಾಗುತ್ತೆ ಎಂದಿದ್ದಾರೆ.

ಹೊಸ ಕಾನೂನು ಚಿತ್ರ ಪ್ರದರ್ಶಕರಿಗೆ ಮರಣ ಶಾಸನವಾಗಿದೆ ಅಂತಾರೆ ಚಿತ್ರ ಪ್ರದರ್ಶಕರು. ಇದೆಲ್ಲದರ ಹೊರೆಯನ್ನ ಟಿಕೆಟ್ ಮೇಲೆ ಹೇರದೆ ಬೇರೆ ವಿಧಿಯಿಲ್ಲ ಅನ್ನೋದೇ ಅವರ ಅಭಿಪ್ರಾಯವಾಗಿದೆ. ಜಿ.ಎಸ್ಟಿ ಜಾರಿಗೆ ತಂದ ಚಿತ್ರ ಪ್ರದರ್ಶನದ ಟಿಕೆಟ್ ಬೆಲೆಯೂ ಈಗ ಇಳಿಮುಖವಾಗಿದೆ. ಹಾಗಾಗಿ ಪ್ರದರ್ಶನಕರಿಗೆ ಮತ್ತು ಚಿತ್ರಮಂದಿರಗಳ ಮಾಲೀಕರಿಗೆ ಇದರಿಂದ ಹೆಚ್ಚಿನ ತೊಂದರೆ ಆಗಲಿದೆ. (ಎನ್.ಬಿ)

Leave a Reply

comments

Related Articles

error: