ಮೈಸೂರು

ಸಾವಿರಾರು ಜನ ಓಡಾಡುವ ಸ್ಥಳದಲ್ಲಿ ಮ್ಯಾನ್ ಹೋಲ್ ಕುಸಿತ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಅಣಕಿಸುವ ಚಿತ್ರ ರಚನೆ

ಮೈಸೂರು,ಸೆ.14:- ನಗರ ಪ್ರದೇಶಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು  ನೋಡಿಯೂ ಕಂಡು ಕಾಣದ ಹಾಗೆ ಕುಳಿತು ಕೊಳ್ಳುವ ಅಧಿಕಾರಿಗಳ ಸಂಖ್ಯೆಯೆ ಹೆಚ್ಚಿದೆ.  ಸಮಸ್ಯೆಗಳನ್ನು ಅವರ ಬಳಿ ತಿಳಿಸಿದರೂ ಕೊಡ ಅತ್ತ ಗಮನಹರಿಸದೆ ಈ ಸಮಸ್ಯೆ ನಮ್ಮದಲ್ಲ ಎಂದುಕೊಂಡಂತೆ ವರ್ತಿಸುವ ಅಧಿಕಾರಿಗಳಿಗೆ ಛಾಟಿ ಬೀಸುವ ಕೆಲಸ ಪ್ರಾರಂಭವಾಗಿದೆ.

ವಾರ್ಡ್ ನಂಬರ್ 50ರಲ್ಲಿರುವ ಬಿ.ಜಿ.ದಾಸ್  ರಸ್ತೆಯ ಅಂದರೆ ಬಿಗ್ ಬಜಾರ್ ಮುಂಭಾಗದ ರಸ್ತೆ , ಹಾರ್ಡವಿಕ್ ಶಾಲೆಯ ಕ್ಯಾಂಟಿನ್ ಮುಂಭಾಗವಿರುವ ಜಾಗದಲ್ಲಿ  ಗೌರಿ ಗಣಪತಿ ಹಬ್ಬದ ದಿನದಂದು ಸುಮಾರು 15 ದಿನದ ಹಿಂದೆಯೇ ಕುಸಿದಿದ್ದ ಮ್ಯಾನ್ ಹೋಲ್ ಮುಚ್ಚ ಬೇಕೆಂದು ಸ್ಥಳೀಯ ಶಿವರಂಜನ ವಿ ಎಂಬವರು  ಮೇಕೆ ಚಿತ್ರವನ್ನು ಬಿಡಿಸಿ ಸಾರ್ವಜನಿಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣಿಗೆ ಕುರಿಯಾಗಿ ಕಾಣುತ್ತಿದ್ದೇವೆ ಎಂಬ ಸಂದೇಶ ಸಾರುವ ಚಿತ್ರವನ್ನು ಚಿತ್ರಿಸಿ ಗಮನ ಸೆಳೆದಿದ್ದಾರೆ.

ಸ್ಥಳೀಯ ಮುಖಂಡ,ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು ಮಾತನಾಡಿ  ಸಾವಿರಾರು ಸಂಖ್ಯೆಯ ವಾಹನಗಳು ಲಕ್ಷಾಂತರ ಮಂದಿ ಮತ್ತು ಶಾಲೆಯ ಮಕ್ಕಳು ಓಡಾಡುವ ಸ್ಥಳವಿದಾದರೂ ಕೂಡ ಕಳೆದ ಹದಿನೈದು ದಿನದಿಂದಲೂ ಕುಸಿದ ಮ್ಯಾನ್ ಹೋಲ್ ದುರಸ್ಥಿಗೆ ಯಾರೂ ಮುಂದಾಗಿಲ್ಲ.  ಈ ಕುರಿತು  ಬಗ್ಗೆ ನಗರಪಾಲಿಕೆ ಯ ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ಗಮನಹರಿಸುತ್ತಿಲ್ಲ.  ಅದಕ್ಕಾಗಿ ಪ್ರಜ್ಞಾವಂತ ಸ್ಥಳೀಯರು’ ನಾವು ಕುರಿಗಳು’  ಎಂಬಂತೆ ಕಾಣುವ ವ್ಯಂಗ ಚಿತ್ರ ಬಿಡಿಸಿ ಎಲ್ಲರ ಕಣ್ಣು ತೆರೆಸಿದ್ದಾರೆ. ಇನ್ನಾದರೂ ನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹಾರ ನೀಡಬೇಕು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: