ಪ್ರಮುಖ ಸುದ್ದಿ

ತಾ.ಪಂ ಮಾಜಿ ಸದಸ್ಯರ ಹಸು ಕಳ್ಳತನ

ರಾಜ್ಯ(ಮಂಡ್ಯ)ಸೆ.14:- ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ತಾ.ಪಂ ಮಾಜಿ ಸದಸ್ಯ ಪ್ರಗತಿಪರ ರೈತ ಎಂ.ಎಲ್.ನಾಗೇಂದ್ರ ಅವರು ಸಾಕಿದ್ದ 50ಸಾವಿರ ರೂ ಬೆಲೆ ಬಾಳುವ ಹಸುಗಳನ್ನು ಕಳ್ಳತನ ಮಾಡಲಾಗಿದೆ.

ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ಕುರಿತು ನಾಗೇಂದ್ರ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಸುಗಳು ಕಳ್ಳತನ ವಾಗಿರುವ ಕುರಿತು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: