ದೇಶ

ದುಪ್ಪಟ, ಬಿಂದಿ ಧರಿಸಿ ಸಂದೇಶ ಸಾರಿದ ಕ್ರಿಕೆಟಿಗ ಗೌತಮ್ ಗಂಭೀರ್

ನವದೆಹಲಿ,ಸೆ.14-ಕ್ರಿಕೆಟಿಗ ಗೌತಮ್ ಗಂಭೀರ್ ದುಪ್ಪಟ ಮತ್ತು ಬಿಂದಿ ಧರಿಸಿ ಜಗತ್ತಿನ ಗಮನ ಸೆಳೆದಿದ್ದಾರೆ. ಈ ರೀತಿ ದುಪ್ಪಟ ಮತ್ತು ಬಿಂದಿ ಧರಿಸುವ ಮೂಲಕ ಸಂದೇಶವೊಂದನ್ನು ಸಾರಿದ್ದಾರೆ.

ಹೊಸದಿಲ್ಲಿಯಲ್ಲಿ ಹಿಜ್ರಾ ಹಬ್ಬದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಗೌತಮ್‌ ಗಂಭೀರ್‌ ತಲೆ ಮೇಲೆ ದುಪ್ಪಟ್ಟ ಹಾಕಿಸಿಕೊಂಡು, ಬಿಂದಿಯನ್ನು ಇರಿಸಿಕೊಂಡು ಮಂಗಳಮುಖಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶ ಸಾರಿದರು.

ಗೌತಮ್‌ ಗಂಭೀರ್‌ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕವಾಗಿ ದೂರವಾಗಿದ್ದ ಸಮುದಾಯದ ಬೆಂಬಲವಾಗಿ ನಿಂತ ಗೌತಮ್‌ ಅವರ ದುಪ್ಪಟ ಮತ್ತು ಬಿಂದಿ ಧರಿಸಿದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಹಿಜ್ರಾ ಹಬ್ಬವನ್ನು ಎಚ್‌ಐವಿ/ಏಡ್ಸ್‌ ಅಲೈನ್ಸ್‌ ಇಂಡಿಯಾ ವತಿಯಿಂದ ‘ಜನನವೇ ಹೀಗೆ’ (Born this way) ಎಂಬ ಥೀಮ್‌ನಡಿಯಲ್ಲಿ ಹಿಜ್ರಾ ಹಬ್ಬವನ್ನು ಈ ಬಾರಿ ಆಚರಿಸಲಾಗುತ್ತಿದೆ. (ಎಂ.ಎನ್)

 

Leave a Reply

comments

Related Articles

error: