ದೇಶಪ್ರಮುಖ ಸುದ್ದಿ

ನೋಟು ನಿಷೇಧದ ನಂತರ ‘ಜನ ಧನ್’ ಖಾತೆಗೆ ಜಮೆಯಾದ ಶೇ.60ರಷ್ಟು ಹಣ ಸಂಶಯಾಸ್ಪದ!

ನವದೆಹಲಿ (ಸೆ.14): ಜನ ಧನ್ ಖಾತೆಯಲ್ಲಿನ ಠೇವಣಿಗಳ ಬಗ್ಗೆ ಪರಿಶೀಲನೆ ಆರಂಭಿಸಿರುವ ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಟ್ಯಾಕ್ಸೇಷನ್) ಭಾರೀ ಪ್ರಮಾಣದಲ್ಲಿ ಅನುಮಾನಾಸ್ಪದ ಹಣ ಇರುವುದನ್ನು ಪತ್ತೆ ಹಚ್ಚಿದೆ.

2016ರ ನವೆಂಬರ್‍ನಲ್ಲಿ 1000 ಹಾಗೂ 500 ರೂ. ನೋಟು ನಿಷೇಧ ಪ್ರಕಟಿಸಿದ ನಂತರದಲ್ಲಿ 37 ದಶಲಕ್ಷ ಜನ ಧನ್ ಖಾತೆಗಳಲ್ಲಿ ಜಮೆಯಾಗಿರುವ ಶೇ.60 ರಷ್ಟು ಹಣವನ್ನು ಸಂಶಯಾಸ್ಪದ ಎಂದು ಗುರುತಿಸಲಾಗಿದೆ. 2016ರ ನವೆಂಬರ್ 8 ಮತ್ತು ಡಿಸೆಂಬರ್ 30, 2016 ರ ನಡುವೆ ಇಂತಹ 37.4 ಮಿಲಿಯನ್ ಖಾತೆಗಳಲ್ಲಿ 42,200 ಕೋಟಿ ರೂ. ಸಂಶಯಾಸ್ಪದ ಹಣ ಜಮಾ ಆಗಿದೆ. ಇದೇ ಅವಧಿಯಲ್ಲಿ ಒಟ್ಟು 70 ಸಾವಿರ ಕೋಟಿ ರೂ. ಜಮಾ ಆಗಿತ್ತು.

ದೇಶದಲ್ಲಿ ಕಪ್ಪು ಹಣದ ಹರಿವನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, 2016 ರ ನವೆಂಬರ್ 8 ರಂದು ಹಳೆಯ 500 ರೂ. ಮತ್ತು 1,000 ರೂ. ನೋಟುಗಳ ಚಲಾವಣೆ ರದ್ದುಗೊಳಿಸಿದ್ದರು. ಜತೆಗೆ ಹಳೆ ನೋಟು ಹಿಂದಿರುಗಿಸಲು ಡಿಸೆಂಬರ್ 30 ರವರೆಗೆ, ಅಂದರೆ 50 ದಿನ ಅವಕಾಶ ಮಾಡಿಕೊಡಲಾಗಿತ್ತು. (ಎನ್.ಬಿ)

Leave a Reply

comments

Related Articles

error: