ದೇಶಪ್ರಮುಖ ಸುದ್ದಿ

ನಟ ಸಲ್ಮಾನ್ ಖಾನ್ ವಿರುದ್ಧ ಎಫ್.ಐ.ಆರ್ ದಾಖಲಿಸಲು ನ್ಯಾಯಾಲಯ ಆದೇಶ

ಮುಂಬೈ (ಸೆ.14): ಸಲ್ಮಾನ್ ಖಾನ್ ಅವರ ಲವ್ ರಾತ್ರಿ ಸಿನಿಮಾ ಇದೀಗ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನವರಾತ್ರಿಯ ದಿನದಂದು ಬಿಡುಗಡೆ ಮಾಡಲು ಸಿದ್ಧವಾದ ಸಿನಿಮಾ ಬಗ್ಗೆ ದೂರು ದಾಖಲಾಗಿದ್ದ ಕಾರಣ ವಿಚಾರಣೆ ನಡೆಸಿದ ನ್ಯಾಯಾಲಯವು, ಖಾನ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ಮಾಣದ ಲವ್ ರಾತ್ರಿ ಸಿನಿಮಾ ನವರಾತ್ರಿ ಪದವನ್ನು ಸಂಕೇತಿಸುವ ಕಾರಣದಿಂದ ಹಿಂದೂ ಭಾವನೆಗಳಿಗೆ ಈ ಸಿನಿಮಾ ಧಕ್ಕೆಯುಂಟುಮಾಡಿದೆ. ಈ ಚಿತ್ರದಲ್ಲಿ ದುರ್ಗಾ ದೇವಿಯ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಸಬ್ ಡಿವಿಶಬಲ್ ನ್ಯಾಯಾಲಯದ ನ್ಯಾಯಾಧೀಶರಾದ ಶೈಲೇಂದ್ರ ರೈ ಅವರು ವಕೀಲ ಸುಧೀರ್ ಕುಮಾರ್ ಓಜಾ ನೀಡಿದ್ದ ದೂರಿನ ಆಧಾರದ ಮೇರೆಗೆ ನಟ ಸಲ್ಮಾನ್ ಖಾನ್ ಹಾಗೂ ಸಿನಿಮಾದ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮಿಥಸ್ಪೂರ ಪೊಲೀಸರಿಗೆ ಆದೇಶಿಸಿದೆ.(ಎನ್.ಬಿ)

Leave a Reply

comments

Related Articles

error: