ಮನರಂಜನೆ

ಅಮೂಲ್ಯ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ ದರ್ಶನ್ ದಂಪತಿ

ಬೆಂಗಳೂರು,ಸೆ.14-ನಟಿ ಅಮೂಲ್ಯಗೆ ಇಂದು 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಮೂಲ್ಯ ಅವರು ಹುಟ್ಟುಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿಕೊಂಡಿದ್ದಾರೆ.

ಈ ಬಾರಿಯ ಹುಟ್ಟುಹಬ್ಬದಲ್ಲಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಭಾಗಿಯಾಗಿದ್ದಾರೆ. ನಟಿ ಅಮೂಲ್ಯ ಅವರ ಹುಟ್ಟುಹಬ್ಬದ ಪ್ರಮುಖ ಆಕರ್ಷಣೆ ನಟ ದರ್ಶನ್ ದಂಪತಿ. ಇತ್ತೀಚಿಗಷ್ಟೆಯಜಮಾನಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಬಹು ದಿನಗಳ ನಂತರ ಡಿ ಬಾಸ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ದಂಪತಿ ಸಮೇತವಾಗಿ ಅಮೂಲ್ಯ ಹುಟ್ಟುಹಬ್ಬದಲ್ಲಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.

ಅಮೂಲ್ಯ ಹುಟ್ಟುಹಬ್ಬದ ಸಂಭ್ರಮದ ಕ್ಷಣವನ್ನು ಸ್ವತಃ ದರ್ಶನ್ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ಸೆರೆ ಹಿಡಿದರು. ಒಂದು ಕಡೆ ಅಮೂಲ್ಯಜಗದೀಶ್ ದಂಪತಿ ,ಇನ್ನೊಂದು ಕಡೆ ದರ್ಶನ್ವಿಜಯಲಕ್ಷ್ಮಿ ದಂಪತಿ ಫೋಟೋದಲ್ಲಿ ಪೋಸ್ ನೀಡಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಟಿ ಅಮೂಲ್ಯಯ ಶುಭಾಶಯ ತಿಳಿಸಿರುವುದಲ್ಲದೆ, ಅಮೂಲ್ಯ ಜೊತೆಗೆ ತೆಗೆದುಕೊಂಡ ಚೆಂದದ ಸೆಲ್ಫಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.

ಹಿಂದೆ ಬಾಲನಟಿಯಾಗಿ ದರ್ಶನ್ ಅವರಲಾಲಿಹಾಡುಸಿನಿಮಾದಲ್ಲಿ ಅಮೂಲ್ಯ ನಟಿಸಿದ್ದರು. ಅದರ ಬಳಿಕ ಇದೀಗ ಮತ್ತೆ ದರ್ಶನ್ ಚಿತ್ರದಲ್ಲಿ ಅಮೂಲ್ಯ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ದರ್ಶನ್ ತಮಿಳಿನವೇದಾಲಂಸಿನಿಮಾ ರಿಮೇಕ್ ಮಾಡುತ್ತಿದ್ದು, ಚಿತ್ರದಲ್ಲಿ ದರ್ಶನ್ ಅವರ ತಂಗಿಯ ರೋಲ್ ನಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ಕಡೆ ಅಮೂಲ್ಯ ಅವರ ತವರು ಮನೆಯಲ್ಲಿಯೂ ಬರ್ತ್ ಡೇ ಆಚರಣೆ ಜೋರಾಗಿದೆ. ಅಮೂಲ್ಯ ತಾಯಿ ಸೇರಿದಂತೆ ಇಡೀ ಕುಟುಂಬ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. (ಎಂ.ಎನ್)

Leave a Reply

comments

Related Articles

error: