ಕರ್ನಾಟಕಪ್ರಮುಖ ಸುದ್ದಿ

ಮಲ್ಯ-ಜೇಟ್ಲಿ ಭೇಟಿ: ಹುಬ್ಬೇರಿಸುವಂಥ ಟ್ವೀಟ್ ಮಾಡಿದ ಸುಬ್ರಹ್ಮಣಿಯನ್ ಸ್ವಾಮಿ!

ಬೆಂಗಳೂರು (ಸೆ.14): ಭಾರತದ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಹೊತ್ತಿರುವ ಉದ್ಯಮಿ ಮಲ್ಯ ಅವರನ್ನು ವಿದೇಶಕ್ಕೆ ಹಾರುವುದಕ್ಕೂ ಮೊದಲು ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿಯಾಗಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಮಲ್ಯ ಅವರು ಭೇಟಿ ಮಾಡಿದ್ದನ್ನು ನಿರಾಕರಿಸುವಂತಿಲ್ಲ ಎಂದಿರುವ ಸ್ವಾಮಿ, ತಮ್ಮ ಎರಡು ಟ್ವೀಟ್‍ಗಳ ಮೂಲಕ ಅನೇಕ ಒಳಾರ್ಥಗಳನ್ನು ಬಿಚ್ಚಿಟ್ಟಿದ್ದಾರೆ. ವಿಜಯ್ ಮಲ್ಯ ಪರಾರಿಯಾಗಲು ಹಣಕಾಸು ಇಲಾಖೆಯ ಕೆಲವರು ಪರೋಕ್ಷ ನೆರವು ನೀಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮಲ್ಯ ವಿರುದ್ಧ ನೀಡಿದ್ದ ಲುಕ್ ಔಟ್ ನೋಟಿಸ್ ದಿನಾಂಕದ ಬಗ್ಗೆ ಕೂಡಾ ಸ್ವಾಮಿ ಉಲ್ಲೇಖಿಸಿದ್ದಾರೆ!

We have now two undeniable facts on the Mallya escape issue: 1. Look Out Notice was diluted on Oct 24, 2015 from “Block” to “Report” departure enabling Mallya to depart with 54 checked luggage items. 2. Mallya told FM in Central Hall of Parliament that he was leaving for London.
-Subramanian Swamy (@Swamy39) September 13, 2018

Our VHS highly placed sources in London tell me that Mallya was offered a bargain like the Spice Jet deal to hand over his IPL cricket club for ₹ 1. But who offered Mallya is not yet known. I am at it.
– Subramanian Swamy (@Swamy39) September 14, 2018

ಇದು ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿದೆ. ಮಲ್ಯ ಒಟ್ಟು 54 ಲಗೇಜ್‍ಗಳೊಂದಿಗೆ ವಿದೇಶಕ್ಕೆ ಪರಾರಿಯಾಗುವ ವೇಳೆ ಬಂಧನ ನೋಟೀಸ್ ಹೊರಡಿಸಲಾಗಿದ್ದರೂ ಅದನ್ನು ಅಕ್ಟೋಬರ್ 24, 2015ರಲ್ಲಿ ತಿದ್ದಲಾಗಿತ್ತು ಎಂದು ಸ್ವಾಮಿ ತಿಳಿಸಿದ್ದಾರೆ. ವಿಜಯ್ ಮಲ್ಯ ಅವರು ಪರಾರಿಯಾಗಲು ಹಣಕಾಸು ಇಲಾಖೆಯ ಕೆಲವರು ಪರೋಕ್ಷ ನೆರವು ನೀಡಿದ್ದರೆಂದು ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದು, ಪರೋಕ್ಷವಾಗಿ ಅರುಣ್ ಜೇಟ್ಲಿಯ ಅವರತ್ತ ಬೆರಳು ತೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: