ಮೈಸೂರು

‘ಅಲ್ ಜೇಮರ್ಸ್’ ಜಾಗೃತಿಗಾಗಿ ಸೆ.30ರಂದು ಮ್ಯಾರಥಾನ್

ಮೈಸೂರು, ಸೆ.14 : ಪ್ರತಿಷ್ಠಿತ ಫೋರಂ ಮಾಲ್ ವತಿಯಿಂದ ‘ಆಲ್ ಜೇಮೇರ್ಸ್’ ಕಾಯಿಲೆ ಕುರಿತು ಜಾಗೃತಿಗಾಗಿ ಫೋರಂ ಪರ್ಪಲ್ ರನ್ ಹಾಫ್ ಮ್ಯಾರಾಥಾನ್ ಅನ್ನು ಸೆ.30 ರಂದು ಏರ್ಪಡಿಸಲಾಗಿದೆ ಎಂದು ಮಾಲ್ ನ ವ್ಯವಸ್ಥಾಪಕ ಧನಶೇಖರ್ ತಿಳಿಸಿದರು.

ಶುಕ್ರವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮಾನ್ಸ್ ,ಡೆಕಾತ್ಲಾನ್ ,ಇನ್ ಟೆನ್ಸ್ ಫಿಟ್ ಸೆಸ್,ಸಿಟಿ ಆನ್ ನೆಟ್,ಸಂಗೀತ,ಸ್ವಿಗ್ಗಿ,ಎನ್‌.ಹೆಚ್.ಆಸ್ಪತ್ರೆ,ಸೋಚ್ ಮತ್ತು ಲ್ಯಾವಿಶ್ ಲಿವಿಂಗ್ ಸಹಯೋಗದಲ್ಲಿ ಮ್ಯಾರಥಾನ್ ಮಂಗಳೂರು, ಬೆಂಗಳೂರು, ಹೈದ್ರಾಬಾದ್, ಉದಯಪುರ್ ಮತ್ತು ಚೆನೈ ಮಾಲ್ ಗಳಲ್ಲಿ ಏಕಕಾಲದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಆಲ್ ಜೇಮೇರ್ಸ್ ಕಾಯಿಲೆ ಕುರಿತು ಅರಿವು ಮೂಡಿಸಲು ಓಟದ ಸ್ಪರ್ಥೆ. ಈ ಕಾಯಿಲೆಯು 55 ವರ್ಷ ವಯಸ್ಸು ಮೇಲ್ಪಟ್ಟ ಜನರು ಮರಣ ಹೊಂದುತ್ತಿರುವ ಕಾರಣ ಹಾಗೂ ಭಾರತದಲ್ಲಿ 4 ಮಿಲಿಯನ್ ಗಿಂತ ಹೆಚ್ಚು ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಅವರ ಆರೋಗ್ಯದ ದೃಷ್ಠಿಯಿಂದ  3,5 ಮತ್ತು ಅರ್ಧ ,21 km ಮ್ಯಾರಥಾನ್ ಆಯೋಜಿಸಲಾಗಿದೆ, ಕ್ಯೂಆರ್ ಡಿ ಸ್ಕ್ಯಾನ್ ನಿಂದಲೂ, https:/www.forummalls.in.forumpurplerun ನೊಂದಾಯಿಸಿಕೊಳ್ಳಬಹುದಾಗಿದ್ದು ವಿವರಗಳಿಗೆ 0821 2300402, 9606080818, [email protected] ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ 2000 ಸಾವಿರ ಜನ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅಂದು ಬೆಳಗ್ಗೆ 5.30 ರಿಂದ ಮಾಲ್ ನಿಂದಲೇ ಆರಂಭವಾಗಿ ಇಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಇಲ್ಲಿ ಸಂಗ್ರಹಿಸಿಲಾದ ಧನವನ್ನು ಬೆಂಗಳೂರಿನ ನಿಮಾನ್ಸ್ ನ ಆಲ್ ಜೇಮೇರ್ಸ್ ವಿಭಾಗಕ್ಕೆ ದೇಣಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಮಾರುಕಟ್ಟೆ ವ್ಯವಸ್ಥಾಪಕ ಕಾರ್ತಿಕ್, ರಘುಕುಮಾರ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: