ಸುದ್ದಿ ಸಂಕ್ಷಿಪ್ತ
ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಭೆ
ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರಥಮ ತ್ರೈವಾರ್ಷಿಕ ಸಮ್ಮೇಳನದ ಅಂಗವಾಗಿ ಡಿ.25ರಂದು ಸಂಜೆ 4 ಗಂಟೆಗೆ ಜೆ.ಕೆ.ಗ್ರೌಂಡ್ಸ್ ಹತ್ತಿರ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಶೋಭಾಯಾತ್ರೆಯು 2.30ಕ್ಕೆ ರಾಜೇಂದ್ರ ಕಲಾಭವನದಿಂದ ಪ್ರಾರಂಭವಾಗಲಿದೆ. ಶ್ರೀ ಹಂಸದೇವಾಚಾರ್ಜೀ ಮಹಾರಾಜ್ ಹರಿದ್ವಾರದ ಶ್ರೀಮದ್ ಜಗದ್ಗುರು ಶ್ರೀ ರಮಾನಂದ ಆಚಾರ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಧ್ಯಕ್ಷತೆ ಮತ್ತು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.