ಸುದ್ದಿ ಸಂಕ್ಷಿಪ್ತ

ಜಾಣ ಜಾಣೆಯರ ಬಳಗದ ಉದ್ಘಾಟನೆ ನಾಳೆ

ಮೈಸೂರು,ಸೆ.14 : ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆ ಸಂಯುಕ್ತವಾಗಿ ಜಾಣ-ಜಾಣೆಯರ ಬಳಗದ ಉದ್ಘಾಟನೆ ಮತ್ತು ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿನಿಯರ ಅಭಿಪ್ರಾಯ ಮಂಡನೆ ಸ್ಪರ್ಧೆಯನ್ನು ಸೆ.15ರ ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ ಅಲ್ಲಿ ಏರ್ಪಡಿಸಲಾಗಿದೆ.

ನಟರಾಜ ಪ್ರತಿಷ್ಠಾನದ ಅಧ‍್ಯಕ್ಷರಾದ ಶ್ರೀ ಚಿದಾನಂದಸ್ವಾಮಿ ಸಾನಿಧ್ಯ ವಹಿಸುವರು. ಮಹಿಳಾ ಚಿಂತಕಿ ಡಾ.ಚಂದ್ರಮತಿ ಸೋಂದಾ ಉದ್ಘಾಟಿಸಲಿದ್ದಾರೆ. ಪ್ರಾಂಶುಪಾಲರಾದ ಡಾ.ಎಂ.ಶಾರದ ಅಧ್ಯಕ್ಷತೆ ವಹಿಸುವರು, ಉಪ ಪ್ರಾಂಶುಪಾಲರಾದ ಜಿ.ಪ್ರಸಾದ ಮೂರ್ತಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: