ದೇಶಪ್ರಮುಖ ಸುದ್ದಿ

ಐದು ಬಾರಿಯ ಸಿಎಂ ಆಗಿದ್ದ ಡಿಡಿ ಲಪಾಂಗ್‌ ರಾಜೀನಾಮೆ: ಮೇಘಾಲಯ ಕಾಂಗ್ರೆಸ್‌ಗೆ ಆಘಾತ

ಶಿಲ್ಲಾಂಗ್‌ (ಸೆ.14): ಮೇಘಾಲಯದಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಡಿ.ಡಿ. ಲಪಾಂಗ್‌ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಹೊರಗಟ್ಟುವ ನೀತಿಯನ್ನು ಪಕ್ಷವು ಅನುಸರಿಸುತ್ತಿದೆ ಎಂದು ಆರೋಪಿಸಿ ಲಪಾಂಗ್ ಅವರು, ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನಿನ್ನೆ ಗುರುವಾರ ರಾತ್ರಿ ಸಲ್ಲಿಸಿರುವ ಲಪಾಂಗ್‌ ಅವರು ತಾನು ‘ಒಲ್ಲದ ಮನಸ್ಸು ಮತ್ತು ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಮೇಘಾಲಯ ಪ್ರದೇಶ್‌ ಕಾಂಗ್ರೆಸ್‌ ಸಮಿತಿಯ ಮಾಜಿ ಮುಖ್ಯಸ್ಥ ಲಪಾಂಗ್‌ ಅವರು “ಪಕ್ಷವು ಹಳಬರನ್ನು ಹೊರಗಟ್ಟುವ ತಂತ್ರವನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಸದ್ಯಕ್ಕೆ ಮೇಘಾಲಯ ಕಾಂಗ್ರೆಸ್‍ಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ ಎಂದೇ ಹೇಳಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: