ಕರ್ನಾಟಕಪ್ರಮುಖ ಸುದ್ದಿ

ರಮೇಶ್ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್, ಅವರ ಮನೆಗೆ ಹೋಗಿ ಮಾತಾಡ್ತೇನೆ: ಸಚಿವ ಡಿಕೆಶಿ

ಬೆಂಗಳೂರು (ಸೆ.14): ಸಚಿವ ರಮೇಶ್ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್, ಅವರ ಮನೆಗೆ ನಾನೇ ಹೋಗಿ ಅವರೊಡನೆ ಮಾತನಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ರಮೇಶ್ ಅವರ ಸಂಕಷ್ಟದ ವೇಳೆ ನಾನು ಕಲ್ಲು ಬಂಡೆ ರೀತಿ ನಿಂತಿದ್ದೆ. ನಾನು ಈಗಲೂ ರಮೇಶ್ ಜಾರಕಿಹೊಳಿ ಜೊತೆ ಇದೀನಿ, ನಾನೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗುತ್ತದೆ ಎಂದು ತಿಳಿಸಿದರು.

ಬಿಜೆಪಿಯವರು ನಮ್ಮ ಹಲವು ಶಾಸಕರನ್ನು ಸಂಪರ್ಕಿಸಿದ್ದಾರೆ, ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಎಷ್ಟು ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಬಿಜೆಪಿ ನಾಯಕರನ್ನು ಕೇಳಿ ಎಂದು ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: