ಸುದ್ದಿ ಸಂಕ್ಷಿಪ್ತ

ಸೆ.17ರಂದು ಸ್ವರಾಜ್ ಇಂಡಿಯಾದ ರಾಜ್ಯ ಸಮ್ಮೇಳನ

ಮೈಸೂರು,ಸೆ.14 : ಸ್ವರಾಜ್ ಇಂಡಿಯಾದ ರಾಜ್ಯ ಸಮ್ಮೇಳನ ಹಾಗೂ ಪಕ್ಷದ ಆಂತರಿಕ ಚುನಾವಣೆಯನ್ನು ಸೆ.17ರ ಬೆಳಗ್ಗೆ 10 ಗಂಟೆಗೆ ಪಡುವಾರಳ್ಳಿಯ ಲೀಲಾ ಚನ್ನಯ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಉದ್ಘಾಟಿಸಲಿದ್ದಾರೆ. ಚುನಾವಣಾಧಿಕಾರಿಯಾಗಿ ರಾಷ್ಟ್ರೀಯ ಮಂಡಲಿ ಸದಸ್ಯ ಕ್ರಿಷ್ಣಿನಾಸಾಮಿ ಕಾರ್ಯ ನಿರ್ವಹಿಸಲಿದ್ದಾರೆ.  ಚಾಮರಸಮಾಲಿ ಪಾಟೀಲ್, ದೇವನೂರು ಮಹಾದೇವ, ಬಡಗಲಪುರ ನಾಗೇಂದ್ರ, ಬಿ.ಕರುಣಾಕರನ್, ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರೆಗೂಡು, ಭಾನು ಮೋಹನ್, ಗೋಪಾಲಯ್ಯ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: