
ಮೈಸೂರು
ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ : ವೈದ್ಯಕೀಯ ಅಧೀಕ್ಷಕನ ಬಂಧನ
ಮೈಸೂರು,ಸೆ.15:- ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯಕೀಯ ಅಧೀಕ್ಷಕನನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಬಂಧಿತನನ್ನು ಮಂಡ್ಯ ಜಿಲ್ಲೆಯ ಇ.ಎಸ್.ಐ.ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕನಾಗಿರುವ ಡಾ.ಇಮ್ತಿಯಾಜ್ ಅಹಮದ್ ಖಾನ್ (58) ಎಂದು ಗುರುತಿಸಲಾಗಿದ್ದು, ಈತ ಮೈಸೂರಿನ ಉದಯಗಿರಿಯ ಎಂ.ಜಿ.ರಸ್ತೆಯಲ್ಲಿರುವ ಮನೆಯಲ್ಲಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಲೈಂಗಿಕ ಕಿರುಕುಳಕ್ಕೆ ಅಡ್ಡಿಯಾದ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಕೆ.ಆರ್.ಆಸ್ಪತ್ರೆಯಲ್ಲಿ ಪತ್ನಿ ತಬಸಮ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)