ಪ್ರಮುಖ ಸುದ್ದಿ

ನೋವಿನ ಗುಳಿಗೆ ಸಾರಿಡಾನ್ ಮತ್ತು ಚರ್ಮ ಮುಲಾಮು ಪಾಂಡಿಮ್ ಸೇರಿದಂತೆ 328 ಔಷಧಿಗಳ ನಿಷೇಧ

ದೇಶ(ನವದೆಹಲಿ)ಸೆ.15:-  ನೋವಿನ ಗುಳಿಗೆ ಸಾರಿಡಾನ್ ಮತ್ತು ಚರ್ಮ ಮುಲಾಮು ಪಾಂಡಿಮ್ ಸೇರಿದಂತೆ 328 ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಔಷಧಿಗಳನ್ನು ಮನಸೋ ಇಚ್ಛೆ ಬಳಕೆ ಮಾಡುವುದನ್ನು ತಪ್ಪಿಸಲು ಈ ಔಷಧಗಳನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಔಷಧಿಯಲ್ಲಿರುವ ಅಂಶಗಳ ವಿವರಗಳನ್ನು ಸೂಕ್ತ ರೀತಿಯಲ್ಲಿ ಜನರಿಗೆ ತಿಳಿಸುತ್ತಿಲ್ಲ. ತಕ್ಷಣದಿಂದಲೇ ಜಾರಿಗೆ ಬರುವಂತೆ ಶೀತ, ನೋವಿನ ಗುಳಿಗೆ, ಜ್ವರದ ಮಾತ್ರೆಗಳು ಮತ್ತು ಕೆಮ್ಮಿಗೆ ಸೇವಿಸುವ ಟಾನಿಕ್‌ಗಳ ಬಳಕೆ ಮತ್ತು ಉತ್ಪಾದನೆ, ಮಾರ್ಕೆಟಿಂಗ್ ಮತ್ತು ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಔಷಧಿಗಳಲ್ಲಿ ರೋಗ ನಿವಾರಕ ಗುಣಗಳನ್ನು ಸಮರ್ಥಿಸುವ ಅಂಶಗಳು ಈ ಔಷಧಿಗಳಲ್ಲಿ ಇಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಔಷಧ ತಾಂತ್ರಿಕ ಸಲಹಾ ಮಂಡಳಿ ತಿಳಿಸಿದೆ.

328 ಔಷಧಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಔಷಧ ತಾಂತ್ರಿಕ ಸಲಹಾ ಮಂಡಳಿ ವರದಿ ಆಧರಿಸಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಸಾರ್ವಜನಿಕರ ಆರೋಗ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಕೆ.ಕ. ಅಗರ್ ವಾಲ್ ತಿಳಿಸಿದರು.

ಕೇಂದ್ರ ಆರೋಗ್ಯ ಇಲಾಖೆಯ ನಿಷೇಧದಿಂದ ಔಷಧಿ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಔಷಧ ಉತ್ಪಾದಕ ಸಂಘಧ ಅಧ್ಯಕ್ಷ ದೀಪ್‌ನಾಥ್ ಚೌಧರಿ ಅಭಿಪ್ರಾಯಪಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: