ಮನರಂಜನೆ

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಟ ಅಜಯ್ ರಾವ್ ದಂಪತಿ

ಬೆಂಗಳೂರು,ಸೆ.15-ನಟ ಅಜಯ್ ರಾವ್ ಪತ್ನಿ ಸ್ವಪ್ನ ಗರ್ಭೀಣಿಯಾಗಿದ್ದು, ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪತ್ನಿ ಸ್ವಪ್ನ ಅವರು ತಾಯ್ತತನದ ಸಂತಸದಲ್ಲಿರುವ ಕೆಲ ಫೋಟೋಗಳನ್ನು ಅಜಯ್ ರಾವ್ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಗಣೇಶ ಹಬ್ಬದ ವಿಶೇಷವಾಗಿ ಸ್ವಪ್ನ ಅವರ ಕುಂಚದಲ್ಲಿ ಅದ್ಭುತವಾಗಿ ಮೂಡಿಬಂದಿರುವ ಗಣೇಶನ ಚಿತ್ರದ ಜತೆಗೆ ಅಭಿಮಾನಿಗಳಿಗೆ ಅಜಯ್ ರಾವ್ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸ್ವಪ್ನ ಅವರು ಗಣೇಶನ ಚಿತ್ರ ಬಿಡಿಸುತ್ತಿರುವ ಫೋಟೋದಲ್ಲಿ ಬೇಬಿ ಬಂಪ್ ಸಹ ಕಾಣಿಸುತ್ತಿದೆ. ಸ್ವಪ್ನ ಅವರು ಬಹಳ ಸಂತೋಷದಿಂದ ಗಣೇಶನ ಚಿತ್ರವನ್ನು ಬಿಡಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

ಅಜೇಯ್ ರಾವ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಸಪೇಟೆ ಮೂಲದವರಾದ ಸ್ವಪ್ನ ಅವರನ್ನು ಅಜಯ್ ರಾವ್ ಪ್ರೀತಿಸಿ ಮದುವೆ ಆಗಿದ್ದರು. (ಎಂ.ಎನ್)

Leave a Reply

comments

Related Articles

error: