ಸುದ್ದಿ ಸಂಕ್ಷಿಪ್ತ
ಜಿಲ್ಲಾ ಮಡಿವಾಳರ ಸಂಘ ವಿಸರ್ಜನೆ
ಮೈಸೂರು ಜಿಲ್ಲಾ ಮಡಿವಾಳರ ಸಂಘದ ತಾತ್ಕಾಲಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ/ನಿರ್ದೇಶಕರುಗಳು, ತಾಲೂಕು ಸಂಘಗಳು ಮತ್ತು ಇಟ್ಟಿಗೆಗೂಡು ವೀರ ಮಡಿವಾಳ ಸಂಘ ಹಾಗೂ ಮಡಿಕಟ್ಟೆಗಳ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಡಿ.19ರಂದು ಮನವಿ ಮಾಡಿರುವಂತೆ ನೇಮಿಸಿದ್ದ ತಾತ್ಕಾಲಿಕ ಸಮಿತಿಯ ಹಂಗಾಮಿ ಅಧ್ಯಕ್ಷ ಚಂದ್ರಶೇಖರ್ ಭೈರಿ, ಪ್ರಧಾನ ಕಾರ್ಯದರ್ಶಿ ಹನೂರು ಕೆ. ನಾಗರಾಜು ಹಾಗೂ ಖಜಾಂಚಿ ರಮೇಶ್ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಯನ್ನು ವಿಸರ್ಜಿಸಲಾಗಿದೆ.
ಈ ಸ್ಥಾನಕ್ಕೆ ಎಚ್. ಸಿಗ್ರಿಶೆಟ್ಟರನ್ನು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡಿರುವುದರಿಂದ ಮೈಸೂರು ಜಿಲ್ಲಾ ಮಡಿವಾಳರ ಸಂಘದ ತಾತ್ಕಾಲಿಕ ಸಮಿತಿಯನ್ನು ಡಿ.21ರಿಂದ ಬೆಳಗ್ಗೆ 11 ಗಂಟೆಯಿಂದ ವಿಸರ್ಜಿಸಲಾಗಿದೆ.
ಮೈಸೂರು ಜಿಲ್ಲಾ ಮಡಿವಾಳರ ಸಂಘದ ಕಾರ್ಯಕಾರಿ ಸಮಿತಿಯ ಸಭೆ ಕರೆದು ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್.ಸಿಗ್ರಿಶೆಟ್ಟಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 97316 04705.