ಮನರಂಜನೆಮೈಸೂರು

ಸ್ಪೋರ್ಟ್ಸ್ ಕಾರು ಓಡಿಸಿ ಧೂಳೆಬ್ಬಿಸಿದ ಚಾಲೆಂಜಿಂಗ್ ಸ್ಟಾರ್

ಮೈಸೂರು,ಸೆ.15:-  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೋರ್ಟ್ಸ್  ಕಾರು ಓಡಿಸಿ ಧೂಳೆಬ್ಬಿಸಿದ್ದಾರೆ.

ಇತ್ತೀಚಿಗೆ ಲಂಬೋರ್ಗಿಯ ಕಾರ್ ರಸ್ತೆಗಿಳಿಸಿ  ಸುದ್ದಿಯಾಗಿದ್ದ ದರ್ಶನ್ ಅವರು ಮೈಸೂರಿನಲ್ಲಿ ಸ್ಪೋರ್ಟ್ಸ್ ಕಾರು ಚಾಲನೆ ಮಾಡಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ.

ದರ್ಶನ್  ಸ್ಪೋರ್ಟ್ಸ್ ಕಾರು ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಕಾರು ಚಲಾಯಿಸುವ ಮೂಲಕ ಫುಲ್ ಎಂಜಾಯ್ ಮಾಡಿದ್ದಾರೆ. ಮೈಸೂರಿನಲ್ಲಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಕಾರ್ ರೇಸರ್ ಗಳಂತೆ ಮಣ್ಣಿನ ರಸ್ತೆಯಲ್ಲಿಯೇ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ಮುಂದಿನ ತಿಂಗಳು ಕಾರ್ ರೇಸ್ ನಡೆಯಲಿರುವ ಹಿನ್ನಲೆಯಲ್ಲಿ ದರ್ಶನ್ ಮೈಸೂರಿನಲ್ಲಿ ಟ್ರೈನಿಂಗ್ ಪಡೆಯುತ್ತಿದ್ದಾರಂತೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: