ಮೈಸೂರು

ಕೃಷ್ಣ ಕೊಲೆ ಪ್ರಕರಣ: ಐವರು ಆರೋಪಿಗಳು ಪೊಲೀಸರಿಗೆ ಶರಣು

ಮೈಸೂರಿನ ವಿ.ವಿ. ಪುರಂನ  ಲಾಯಲ್ ವರ್ಲ್ಡ್ ಬಳಿ ಹಾಡು ಹಗಲೇ ವ್ಯಕ್ತಿಯೋರ್ವನನ್ನು ಕೊಲೆಗೈಯ್ಯಲಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳು ಪೊಲೀಸರಿಗೆ ಶನಿವಾರ ಶರಣಾಗಿದ್ದಾರೆ.

ವಿ.ವಿ.ಪುರಂನಲ್ಲಿ ಹಾಡುಹಗಲೇ ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಎಂಬವನನ್ನು ಮುಸುಕುಧಾರಿಗಳ ತಂಡವೊಂದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿತ್ತು. ಕೊಲೆಗೆ ಸಂಬಂಧಿಸಿದಂತೆ ಇನ್ಸಪೆಕ್ಟರ್ ರವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ಆರೋಪಿಗಳು ತಾವೇ ವಕೀಲ ಬಸವರಾಜು ಎಂಬುವರ ಜೊತೆ ಬಂದು ಶರಣಾಗಿದ್ದಾರೆ ಎನ್ನಲಾಗಿದೆ. ಹೇಮಂತ್, ಸಂದೇಶ್, ಧರ್ಮ, ಮೂರ್ತಿ, ಸಂಜು ಎಂಬವರೇ ಈ ಕೊಲೆಗೈಯ್ದಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ವಿ.ವಿ.ಪುರಂ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

Leave a Reply

comments

Related Articles

error: