ಮೈಸೂರು

ಸೆ.26ರಂದು ದಿ.ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ‘ಪಿಆರ್ ಟಿ’ ಕಲಾ ಪ್ರಶಸ್ತಿ ಪ್ರದಾನ

ಸೆ.24 ರಿಂದ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು

ಮೈಸೂರು,ಸೆ.15 : ತುಮಕೂರಿನ ರವೀಂದ್ರ ಕಲಾ ನಿಕೇತನ ಸ್ಕೂಲ್ ಆಫ್ ಆರ್ಟ್ ಮತ್ತು ಕನ್ನಡ ಸಾಹಿತ್ಯ ಭವನದಲ್ಲಿ ಪಿಅರ್ ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.26ರಂದು ಏರ್ಪಡಿಸಲಾಗಿದೆ.

ಅಪ್ರತಿಮ ಚಿತ್ರಕಲಾವಿದ ದಿ. ಪಿ.ಆರ್.ತಿಪ್ಪೇಸ್ವಾಮಿ ಜನ್ಮ ದಿನದ ಅಂಗವಾಗಿ ಅವರ ಹೆಸರಿನಲ್ಲಿ ಕೊಡಮಾಡಲ್ಪಡುವ ಪ್ರಶಸ್ತಿಗೆ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲಾವಿದ ಬಿ.ಪಿ.ರಾಮಕೃಷ್ಣ ಪಾತ್ರರಾಗಿದ್ದು, ಅಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ 50 ಸಾವಿರ ನಗದು ಸೇರಿದಂತೆ ಪಾರಿತೋಷಕ ನೀಡಿ ಸನ್ಮಾನಿಸಲಾಗುವುದು ಎಂದು ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಜಯಮಾಲ, ಬಂಡೆಪ್ಪ ಕಾಶೆಂಪುರ್, ಶ್ರೀನಿವಾಸ, ವೆಂಕಟರಮಣ್ಣಪ್ಪ ಇವರುಗಳೊಂದಿಗೆ ಲಲಿತಕಲೆ, ಜಾನಪದ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕಲಾವಿದರು, ಸಾಹಿತಿಗಳು, ಜಾನಪದ ವಿದ್ವಾಂಸರು ಇನ್ನಿತರ ಗಣ್ಯರು ಹಾಜರಿರಲಿದ್ದಾರೆ ಎಂದರು ಹೇಳಿದರು.

ಈ ಕಾರ್ಯಕ್ರಮದ ಅಂಗವಾಗಿ ಸೆ.24 ರಿಂದ  ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅದರಂತೆ ರಾಜ್ಯಮಟ್ಟದ ಹಿರಿಯ ಕಲಾವಿದರ ಚಿತ್ರಕಲಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ, ಕಲೆ, ಸಾಹಿತ್ಯ, ಸಾಮಾಜಿಕ ಹಾಗು ಜಾನಪದ ಕ್ಷೇತ್ರಕ್ಕೆ ಕೊಡುಗೆ ಕುರಿತಂತೆ ವಿಚಾರ ಸಂಕಿರಣ, ಕಲಾ ಪ್ರದರ್ಶನ, ಬಹುಮಾನ ವಿತರಣೆ, ಹಿರಿಯ ಕಲಾವಿದರ ಸನ್ಮಾನ ಹಾಗೂ ಪಿಆರ್ ಟಿ ಕುರಿತು ಸಾಕ್ಷಚಿತ್ರ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಮೇರು ಕಲಾವಿದ ದಿ. ಪಿ.ಆರ್.ತಿಪ್ಪೇಸ್ವಾಮಿಯವರು ನಗರದ ಚಾಮರಾಜ ಚಿತ್ರಕಲಾ ಶಾಲೆಯಲ್ಲಿ ಕಲೆಯನ್ನು ಅಭ್ಯಾಸಿಸಿ ನಿಸರ್ಗಚಿತ್ರ ರಚನೆಯಲ್ಲಿ ಸಿದ್ಧಿಗಳಿಸಿದ್ದ ಅವರು ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ್ದರು, ಅವರ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಮಹದೇವಶೆಟ್ಟಿ, ಖಜಾಂಚಿ ಪ್ರೊ.ಪರಮೆಶ್ವರಯ್ಯ, ನಿರ್ದೇಶಕ ಚಿಕ್ಕಣ್ಣ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: