ಮೈಸೂರು

ಬಿಸಿ ಊಟದ ಆಹಾರ ಸಾಮಾಗ್ರಿಗಳಲ್ಲಿ ಹುಳು, ಜಿರಳೆ: ಪೋಷಕರಿಂದ ಪ್ರತಿಭಟನೆ

ಮೈಸೂರು,(ಬೈಲಕುಪ್ಪೆ),ಸೆ.15- ಬಿಸಿ ಊಟದ ಆಹಾರ ಸಾಮಾಗ್ರಿಗಳಲ್ಲಿ ಹುಳು ಮತ್ತು ಜಿರಳೆ ಇರುವುದನ್ನು ಖಂಡಿಸಿ ಜನಪ್ರತಿನಿಧಿಗಳು, ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಿರಿಯಾಪಟ್ಟಣ ತಾಲೂಕಿನ ಮಂಚದೇವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮುಖ್ಯಉಪಾಧ್ಯಾಯರು ಹಾಗೂ ಅಡುಗೆ ಸಹಾಯಕಿಯರ ಬೇಜವಾಬ್ದರಿಯೇ ಇದಕ್ಕೆ ಕಾರಣವೆಂದು ಆರೋಪಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಬಿಸಿ ಊಟ ತಾಲೂಕು ವಿಸ್ತರಣಾಧಿಕಾರಿಗಳು ಸಕಾಲಕ್ಕೆ ಪರಿಶೀಲನೆ ನಡೆಸದೆ ಇರುವುದರಿಂದ ಈ ಸಮಸ್ಯೆಗಳು ಎದುರಾಗುತ್ತಿವೆ ಎಂದು ದೂರಿದ ಪ್ರತಿಭಟನಕಾರರು, ಹಿರಿಯ ಅಧಿಕಾರಿಗಳು ಈ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೋಷಕರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಾಹಿತಿ ಪಡೆಯುವ ಶಾಲೆಗೆ ಹೋದ ಸಂದರ್ಭದಲ್ಲಿ ಅಡುಗೆ ಸಹಾಯಕರು ಬಳಸುತ್ತಿದ್ದ ಹುಳು ಮಿಶ್ರಿತ ಬೆಳೆ, ಅಶುದ್ಧ ನೀರನ್ನು ಗಮನಿಸಿ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಲಾಯಿತು. ಆದರೆ ಮುಖ್ಯೋಪಾಧ್ಯಾಯಿನಿ ಇದಕ್ಕೆ ಉದ್ಧಟತನದ ಉತ್ತರ ನೀಡಿದರು ಎಂದು ಪೋಷಕ ಆನಂದ್ ತಿಳಿಸಿದರು.

ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಎಸ್.ರಾಮು, ಹಾಲು ಉತ್ಪಾದಕರ ಸಹಾಕಾರ ಸಂಘದ ಅಧ್ಯಕ್ಷ ಎಂ.ಬಿ. ಮಂಜುನಾಥ್, ಮಾಜಿ ಗ್ರಾಪಂ ಅಧ್ಯಕ್ಷ ಸುರೇಶ, ನಾಗರಾಜು ಸೇರಿದಂತೆ ಇತರರು ಇದ್ದರು. (ಆರ್.ಬಿ.ಆರ್, ಎಂ.ಎನ್)

Leave a Reply

comments

Related Articles

error: