ಕ್ರೀಡೆ

ಸೆ.19 ರಿಂದ ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡ ಪ್ರಕಟ

ಬೆಂಗಳೂರು,ಸೆ.15-ಇದೇ ತಿಂಗಳ 19 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು,15 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ.

ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಿನಯ್ ಕುಮಾರ್ ಈ ಬಾರಿ ನಾಯಕರಾಗಿ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಕರ್ನಾಟಕ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ರಾಜ್ಯ ತಂಡ ತನ್ನೆಲ್ಲಾ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಲಿದ್ದು, ಬಲಿಷ್ಠ ಮುಂಬೈ, ಪಂಜಾಬ್, ವಿದರ್ಭ ಸವಾಲನ್ನು ಎದುರಿಸಬೇಕಿದೆ. ಜತೆಗೆ ಗೋವಾ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ರೈಲ್ವೇಸ್ ತಂಡಗಳು ಸಹ ‘ಎ’ ಗುಂಪಿನಲ್ಲಿವೆ. ಅ.8ರವರೆಗೂ ಗುಂಪು ಹಂತ ನಡೆಯಲಿದೆ.

ತಂಡ ಇಂತಿದೆ: ವಿನಯ್ ಕುಮಾರ್ (ನಾಯಕ), ಮಯಾಂಕ್ ಅಗರ್‌ವಾಲ್, ಆರ್.ಸಮರ್ಥ್, ಕರುಣ್ ನಾಯರ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಜೆ.ಸುಚಿತ್, ಅಭಿಷೇಕ್ ರೆಡ್ಡಿ, ನವೀನ್ ಎಂ.ಜಿ, ಶರತ್ ಬಿ.ಆರ್. ಎರ್ರೆ ಗೌಡ ತಂಡದ ಕೋಚ್ ಆಗಿದ್ದರೆ, ಎಸ್.ಅರವಿಂದ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: