ಮೈಸೂರು

ಜೀವನದಲ್ಲಿ ಜಿಗುಪ್ಸೆ : ಯುವಕ ನೇಣಿಗೆ ಶರಣು

ಮೈಸೂರು,ಸೆ.15:- ಜೀವನದಲ್ಲಿ ಜಿಗುಪ್ಸೆ ಹೊಂದಿದ  ಯುವಕನೋರ್ವ ನೇಣಿಗೆ ಶರಣಾದ ಘಟನೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

ಗಾರೆ ಕೆಲಸ ಮಾಡುತ್ತಿದ್ದ ಸಂಜಯ್ ಕುಮಾರ್ (17)ಎಂದು ಗುರುತಿಸಲಾಗಿದೆ. ಆರು ತಿಂಗಳ ಹಿಂದೆ ತಂದೆ ಚೆನ್ನಬಸವರಾಜು ಮೃತಪಟ್ಟಿದ್ದರು. ಚಿಕ್ಕವಯಸ್ಸಿಗೇ ಕುಟುಂಬದ ನಿರ್ವಹಣೆ ಹೆಗಲ ಮೇಲೆ ಬಿದ್ದಿತ್ತು. ಇದರಿಂದ ಬೇಸತ್ತ ಸಂಜಯ್ ನೇಣಿಗೆ ಶರಣಾಗಿದ್ದಾನೆ.

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: