ದೇಶ

ಶ್ರೀನಗರ: ಪ್ರಸಿದ್ಧ ಹೋಟೆಲ್ ನಲ್ಲಿ ಅಗ್ನಿ ಅವಘಡ

ಶ್ರೀನಗರ,ಸೆ.15-ಹಲವು ಖಾಸಗಿ ಸಂಸ್ಥೆಗಳ ಕಚೇರಿಗಳಿರುವ ಆರು ಮಹಡಿಯ ಪ್ರಸಿದ್ಧ ಹೊಟೇಲ್ ಪಾಂಪೋಶ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡದ ಮೇಲಿನ ಮಹಡಿ ಬೆಂಕಿಯಿಂದಾಗಿ ಸಂಪೂರ್ಣ ಭಸ್ಮವಾಗಿರುವ ಘಟನೆ ಶ್ರೀನಗರದ ರೀಗಲ್ ಚೌಕದಲ್ಲಿ ನಡೆದಿದೆ.

ಬೆಂಕಿಯನ್ನು ತಹಬಂದಿಗೆ ತರಲಾಗಿದೆ. ಕಟ್ಟಡದೊಳಗೆ ಯಾರೂ ಕೂಡ ಸಿಲುಕಿಹಾಕಿಕೊಂಡಿಲ್ಲ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಹೊಟೇಲ್ ಕಟ್ಟಡದ ಆರನೇ ಹಾಗೂ ಕೊನೆಯ ಮಹಡಿಯಲ್ಲಿ ಬೆಂಕಿಯ ಹೊಗೆ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆರನೇ ಮಹಡಿಗೆ ತಲುಪಿ ಬೆಂಕಿಯು ಇತರ ಮಹಡಿಗೆ ಹರಡದಂತೆ ನೋಡಿಕೊಳ್ಳುತ್ತಿದ್ದಾರೆ. ಹೊಟೇಲ್ನಲ್ಲಿರುವ ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: